Breaking News

ಧಾರವಾಡ ಜಿಲ್ಲೆ ಉಗ್ರರ ಅಡಗುತಾಣವಾಗುತ್ತಿದೆಯಾ….?

ಧಾರವಾಡ: ಧಾರವಾಡ ಜಿಲ್ಲೆ ಸಾಮಾನ್ಯವಾಗಿ ಅರೆಮಲೆನಾಡು ಪ್ರದೇಶ. ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಪ್ರದೇಶ. ಈ ಪ್ರದೇಶ ಇದೀಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

ದೆಹಲಿ ಎನ್‌ಐಎ ತಂಡ ಇತ್ತೀಚಿಗಷ್ಟೇ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಮೂವರಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ಹುಬ್ಬಳ್ಳಿ, ಧಾರವಾಡದ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಇದೀಗ ಹುಬ್ಬಳ್ಳಿ, ಧಾರವಾಡದ ಜನತೆ ಭಯಭೀತರಾಗಿದ್ದಾರೆ.

ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರಾಗಿರಬಹುದು ಹಾಗೂ ಜಿಲ್ಲಾ ಪೊಲೀಸರಾಗಿರಬಹುದು ನಿರಂತರವಾಗಿ ದೆಹಲಿ ಪೊಲೀಸರ ಸಂಪರ್ಕದಲ್ಲಿದ್ದಾರೆ. ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆ ಬಗ್ಗೆ ಕುರುಹು ಸಹ ಪತ್ತೆಯಾಗಿಲ್ಲ.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *