Breaking News

ನಿವೃತ್ತ ಸರ್ಕಾರಿ ನೌಕರರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯ ಸರ್ಕಾರದಿಂದ ನಿವೃತ್ತ, ಮರಣೋತ್ತರ ಸರ್ಕಾರಿ ನೌಕರರ ತಡವಾಗಿ ಪಾವತಿಯಾದ ಪಿಂಚಣಿ, ಉಪದನ ಹಾಗೂ ಗಳಿಕ ರಜೆ ನಗದೀಕರಣಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

ಶೇ.8ರಷ್ಟಿದ್ದಂತ ಬಡ್ಡಿದರವನ್ನು ಪರಿಷ್ಕರಿಸಿ ಶೇ.5.4ಕ್ಕೆ ನಿಗದಿ ಪಡಿಸಲಾಗಿದೆ. ಈ ಮೂಲಕ ನಿವೃತ್ತಿ, ಮರಣೋತ್ತರ ಸೌಲಭ್ಯಗಳ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಸೇವೆಯಿಂದ ನಿವೃತ್ತಿ ಹೊಂದಿದ ನಿವೃತ್ತ ಸರ್ಕಾರಿ ನೌಕರರಿಗೆ ಅಥವಾ ಅವರು ಸೇವೆಯಲ್ಲಿರುವಾಗ ಮರಣ ಹೊಂದಿದ್ದಲ್ಲಿ ಮತ್ತು ನಿವೃತ್ತಿ ನಂತ್ರ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಲಭ್ಯವಾಗುವ ನಿವೃತ್ತಿ ವೇತನ, ಮರಣೋತ್ತರ ಸೌಲಭ್ಯಗಳಿಗೆ ವಾರ್ಷಿಕ ಶೇ.12ರ ದರದಲ್ಲಿ ಷರತ್ತು ನಿಬಂಧನೆಗಳೊಂದಿಗೆ ಪಾವತಿಸಲು ಆದೇಶಿಸಲಾಗಿದೆ. ಆನಂತ್ರ ಈ ಬಡ್ಡಿದರವನ್ನು ಪರಿಷ್ಕರಿಸಿ ಶೇ.8ರ ದರದಲ್ಲಿ ಆದೇಶಿಸಲಾಗಿದೆ.

Share News

About admin

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *