ಧಾರವಾಡ : ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಹಿಂಪಡೆಯುವ ಹಾಗೂ ಪಠ್ಯ ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಮಾಜ ಸುಧಾರಕರ ಕುರಿತಾದ ವಿಷಯಗಳನ್ನು ಕೈ ಬಿಡುವ ರಾಜ್ಯ ಸರ್ಕಾರದ ಪ್ರಸ್ತಾಪ ರಾಜ್ಯಪಾಲರು ತಿರಸ್ಕರಿಸಲು ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಕೆ ಮಾಡಿದರು.
ಗೋ ಹತ್ಯಾ ನಿಷೇಧಕ್ಕೆ ಸಂಬಂಧ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಜನರ, ಮಠಾಧಿಶರ, ಸಂಘಟನಗಳ ಹೋರಾಟ ಹಾಗೂ ಸಂವಿಧಾನದ ಮೂಲ ಅನೆಯಾದ ರೈತರ ಬೆನ್ನೆಲುಬು,ದೇಶದ ಆರ್ಥಿಕ ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕೃಷಿ ಮುಂತಾದವುಗಳಿಗೆ ಆಧಾರ ಸ್ತಂಭ ಗೋ ವಂಶವಾಗಿದ್ದು ಅದರ ರಕ್ಷಣೆ,ಪೋಷಣೆ ಸರ್ಕಾರದ ಆದ್ಯ ಕರ್ತವ್ಯ ಎಂದು ಅರಿತು ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿತ್ತು. ಆದ್ರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರ ಅದನ್ನು ವಾಪಸ್ ಪಡೆಯಲು ನಿರ್ಧರಿಸಿದ್ದು ಅಕ್ಷಮ್ಯವಾಗಿದೆ. ಆಮಿಷ, ಒತ್ತಾಯದ, ಮೋಸದ ಮತಾಂತರ ನಿಷೇಧ ಮಸೂದೆ ವಾಪಸ್ ಇದೂ ಸಹ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿತ್ತು. ಮತಾಂತರ ಮಹಾ ಪಿಡುಗು ದೇಶದ ಸಾಂಸ್ಕೃತಿಕ ಭೌಗೋಳಿಕ, ಜನಸಂಖ್ಯೆ ಮುಂತಾದ ಅಸಮತೋಲನ ಜೊತೆಗೆ ಸಂಘರ್ಷಕ್ಕೂ ಕಾರಣಿಭೂತವಾಗಿದ್ದು, ಅದಕ್ಕೆ ನಾಡಿನ ಎಲ್ಲ ಸಮಾಜ, ಸಮುದಾಯಗಳ, ಸಂವಿಧಾನದ ಆಶಯದಂತೆ ಜಾರಿಗೆ ತಂದ ಮಸೂದೆಯನ್ನು ಪ್ರಸಕ್ತ ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲು ಯತ್ನಿಸುತ್ತಿದೆ. ಪಠ್ಯಪುಸ್ತಕದಲ್ಲಿ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ,ಸಮಾಜ ಸುಧಾರಕರ ಪಠ್ಯ ಕೈಬಿಡುವ ನಿರ್ಧಾರ ದೇಶ ಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಮಾಡಿದ ಘೋರ ಅವಮಾನ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಈ ಮೂರು ಪ್ರಸ್ತಾವನೆಗೆ ನಮ್ಮ ಪ್ರಬಲ ವಿರೋಧವಿದ್ದು ತಾವು ತಕ್ಷಣ ಮಧ್ಯ ಪ್ರವೇಶಿಸಿ ಈ ಪ್ರಸ್ತಾವನೆಗಳನ್ನು ತಿರಸ್ಕರಿಸಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥ ಕಾಟ್ಕರ್, ತಾಲೂಕು ಸಂಚಾಲಕ ಪಾಂಡು ಯಮೋಜಿ, ವಿಶ್ವಾಸ ನಾಗಶೆಟ್ಟಿ, ಹನುಮಂತ ಉಣಕಲ್, ಮಲ್ಲಿಕಾರ್ಜುನ, ಪುಟ್ಟು ಜೋಶಿ ಸೇರಿದಂತೆ ಹಲವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





