ಆನೇಕಲ್: ಮದುವೆಗೆ ಮನೆಯವರು ವಿರೋಧಿಸಿದ್ದರಿಂದ ಬೇಸತ್ತ ಪ್ರೇಮಿಗಳು ರೈಲ್ವೇ ಹಳಿಯಲ್ಲಿ ಸಾವಲ್ಲಿ ಒಂದಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ಈ ಪ್ರಕರಣ ನಡೆದಿದೆ.
ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಆನೇಕಲ್ನ ಸಮಂದೂರು ಬಳಿ ನಿನ್ನೆ ಈ ಆತ್ಮಹತ್ಯೆ ನಡೆದಿದ್ದು, ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಇಬ್ಬರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದೇ ಇಬ್ಬರೂ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ. ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

