Breaking News

ಪದ್ಮಾವತಿ ಜುಲೈ ೧೫ರಂದು ಬಿಡುಗಡೆ

ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಎಂಬ ಹಾಸ್ಯಮಯ ಚಲನಚಿತ್ರವನ್ನು ನಿರ್ಮಿಸಿದ್ದ ನಟ ಕಮ್ ನಿರ್ಮಾಪಕ ವಿಕ್ರಮ್‌ ಆರ್ಯ ಅಭಿನಯದ, ವಿಭಿನ್ನ ಶೈಲಿಯ ಚಿತ್ರ ಪದ್ಮಾವತಿ. ಮಹಿಳಾ ಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ  ವಿಕ್ರಂ ಆರ್ಯ ಜೊತೆಗೆ ಸಾಕ್ಷಿ ಮೇಘನಾ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಇದೇತಿಂಗಳ ೧೫ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.
  ರಾವ್ ಅಂಡ್ ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್‌ರಾವ್ ಹಾಗೂ ನಾಮದೇವ ಭಟ್ಟರ್ ಸೇರಿ ನಿರ್ಮಿಸಿರುವ ಪದ್ಮಾವತಿ ಚಿತ್ರದಲ್ಲಿ ಹೆಣ್ಣಿನ ಮನದ ಭಾವನೆಗಳು, ಆಕೆಯ ತಪ್ಪು, ಒಪ್ಪುಗಳನ್ನು ಮನಮುಟ್ಟುವಂತೆ ದೃಶ್ಯರೂಪದಲ್ಲಿ ತೆರೆಮೇಲೆ ಹೇಳುವ ಪ್ರಯತ್ನವಿದೆ. ಪ್ರಮುಖವಾಗಿ ಹಳ್ಳಿಗಾಡಿನ ಕೋಗಿಲೆ ಕೊಪ್ಪಳದ ಗಂಗಮ್ಮ ಅವರು ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ವಿಕ್ರಂಆರ್ಯ ಒಬ್ಬ ಮಿಲಿಟರಿ ಅಧಿಕಾರಿಯಾಗಿ ನಟಿಸಿರುವ ಈ ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ದಾಮೋದರ್ ಪಾರಗೆ ಅವರು ಅಭಿನಯಿಸಿದ್ದಾರೆ. ಚಿತ್ರನಿರ್ಮಾಣದಲ್ಲಿ ಇವರೂ ಸಹ ಪಾಲುದಾರರು. ಅರಿಯದ ವಯಸಿನಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಆನಂತರ ಅದನ್ನು ಸರಿಪಡಿಸಿಕೊಳ್ಳಲು ಹೋದ ನಾಯಕಿಯ ಕಥೆಯ ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಕೂಡ ಚಿತ್ರದಲ್ಲಿದ್ದು, ಶಿವಳ್ಳಿಬೆಟ್ಟ, ಸಾಗರ, ಹೊಸನಗರ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮುಂತಾದೆಡೆ ೫೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  
 ಹಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿರುವ  ಮಿಥುನ್ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶೋಯಬ್ ಅಹ್ಮದ್ ಅವರ ಛಾಯಾಗ್ರಹಣ ಹಾಗೂ ಹಾಡುಗಳಿಗೆ ದಿನೇಶ್‌ಕುಮಾರ್ ಅವರ ಸಂಗೀತ ಸಂಯೋಜನೆಯಿದೆ. ಲತಾ ಎಸ್. ಅವರು ಈ ಚಿತ್ರದ ಕಥೆ ಹಾಗೂ ಚಿತ್ರಕಥೆ ರಚಿಸಿದ್ದಾರೆ. 

ಈಶ್ವರ್ ಅವರ ಸಂಕಲನ, ಥ್ರಿಲ್ಲರ್‌ಮಂಜು ಅವರ ಸಾಹಸ ನಿರ್ದೇಶನ, ತ್ರಿಭುವನ್ ಅವರ ನೃತ್ಯ ನಿರ್ದೇಶನ, ಪ್ರೇಮ್‌ ಸಾಯಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ವಿಕ್ರಮ್‌ ಆರ್ಯ, ಸಾಕ್ಷಿ ಮೇಘನಾ, ದಾಮೋದರ್‌ರಾವ್, ರಾಘವ ಕಲಾಲ್, ಸುರೇಶ್ ಸಾಯಿರಾಮ್, ಅಭಿಲಾಷ್, ಶರಣ್ ಗಿನಕೇರಿ, ಶಿವಮೊಗ್ಗ ರಾಮಣ್ಣ, ಸಿ.ಎನ್.ಪ್ರೀತಿ, ರಾಜೇಶ್ವರಿ ಪಾಂಡೆ, ಅರ್ಚನಾ ಶೆಟ್ಟಿ ಸೇರಿದಂತೆ ಹಲವಾರು ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *