Breaking News

ಹುಬ್ಬಳ್ಳಿಯಲ್ಲಿ ಮಾ. 26ಕ್ಕೆ ಟೈಕಾನ್ ಉದ್ಯಮಶೀಲತಾ ಶೃಂಗಸಭೆ : ವಿಜಯ ಸೈಗಲ್

ಹುಬ್ಬಳ್ಳಿ: ಟೈಕಾನ್ ಹುಬ್ಬಳ್ಳಿಯ ವತಿಯಿಂದ ಮಹಿಳಾ ಕಾನ್ಕ್ಲೇವ್, ಸ್ಟಾರ್ಟ್ ಅಫ್ ಶೃಂಗಸಭೆ ಮತ್ತು ಟೈಕಾನ್ -2022 ವಾರ್ಷಿಕೋತ್ಸವವನ್ನು ಇದೇ 26ರಂದು ಉಣಕಲ್ ಹತ್ತಿರ ನವೀನ್ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ ಎಂದು ಟೈಕಾನ್ ಅಧ್ಯಕ್ಷ ವಿಜಯ ಸೈಗಲ್ ಹೇಳಿದರು.

ನಗರದಲ್ಲಿಂದು ಟೈಕಾನ್ ಶೃಂಗಸಭೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಿ ಇಂಡಸ್ ಎಂಟರ್ ಪ್ರೆನಿಯರ್ಸ್ ಟೈ ಹುಬ್ಬಳ್ಳಿಯು ದೊಡ್ಡಮಟ್ಟದ ಉದ್ಯಮಶೀಲತಾ ಶೃಂಗ ಸಭೆಯನ್ನು ಆಯೋಜಿಸಿದೆ. ಎಜುಕೇಷನ್, ನೆಟ್ವರ್ಕಿಂಗ್, ಮೆಟಾರಿಂಗ್ ಮತ್ತು ಫಂಡಿಂಗ್ ಧ್ಯೇಯ ವಾಕ್ಯದ ಆದ್ಯತೆ ಮೇಲೆ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದರು.

ಇನ್ನೂ ಅಂದು ನಡೆಯುವ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸುಧಾಮೂರ್ತಿ, ಸುನೀಲ್ ಶೆಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಮುರಗೇಶ ನಿರಾಣಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *