ರಾಯಚೂರ ; ಮಕ್ಕಳು ಆಗದೇ ಇರೋರನ್ನೇ ಟಾರ್ಗೆಟ್ ಮಾಡಿ ಮಕ್ಕಳಾಗುವ ಔಷಧಿ ನೀಡುತ್ತೇನೆ. ಎಂದು ಮೋಸ ಮಾಡುವ ಬಹುದೊಡ್ಡ ಮೋಸದ ಜಾಲ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಮಕ್ಕಳಾಗುವ ಔಷಧಿ ನೀಡಲು ಬೆಳಗಾವಿಯಿಂದ ನಕಲಿ ಆಯುರ್ವೇದಿಕ್ ವೈದ್ಯರ ತಂಡದಿಂದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಹಿಳೆಯರು ಮೋಸದ ಜಾಲಕ್ಕೆ ಸಿಲುಕಿದ್ದಾರೆ. ಬಣ್ಣ ಬಣ್ಣದ ಮಾತಾಡಿ 30 ರಿಂದ 50 ಸಾವಿರ ಹಣ ವಸೂಲಿ ಮಾಡಿ ಒಂದು ತಿಂಗಳಾದ್ರೂ ನಕಲಿ ವೈದ್ಯರಿಂದ ಈವರೆಗೂ ನೋ ರೆಸ್ಪಾನ್ಸ್ ಎಂಬಂತಾಗಿದೆ. ಕರೆ ಮಾಡಿದ್ರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆದ್ರೆ ನಕಲಿ ವೈದ್ಯ ಬೆಳಗಾವಿ ಕಾರ್ತಿಕ ನಿಪ್ಪಾಣಿ 3 ನೇ ಕ್ರಾಸ್ ದ್ರಾಮಣ್ಣ ಆಯುರ್ವೇದಿಕ್ ಹಾಸ್ಪಿಟಲ್ ನ ಪಂಡಿತ ಪರಶುರಾಮ ಎಂದು ವಿಳಾಸ ನೀಡಿದ್ದಾನೆ. ಮಕ್ಕಳಾಗುವ ಆಸೆಯಿಂದ ಪಾಪ ಮಹಿಳೆಯರು ಸಾಲ ಮಾಡಿ ಹಣ ತಂದುಕೊಟ್ಟಿದ್ದಾರೆ. ಅನ್ಯಾಯಕ್ಕೆ ಒಳಗಾದ ಮಹಿಳೆಯರು ಪಾಪ ಇತ್ತ ಔಷಧಿ ಇಲ್ಲದೆ ಅತ್ತ ಹಣವೂ ಇಲ್ಲದೇ ಕಂಗಾಲಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





