ಬೆಂಗಳೂರು : ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದು ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ನಗರದ ನೈಸ್ ರಸ್ತೆಯ ಚನ್ನಸಂದ್ರದ ಬಳಿ ನಡು ರಸ್ತೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದ ದರ್ಶನ್ (40) ಸುಟ್ಟು ಕರಕಲಾದ ನತ ದೃಷ್ಟ . ಕೂಡಲೇ ಸ್ಥಳೀಯರು ನೈಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನೈಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆರ್. ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಬೆಂಗಳೂರು ಉತ್ತರ ವಿಭಾಗದ ಸಂಚಾರಿ ಡಿಸಿಪಿ ಸವಿತಾ ಅವರು ಬೇಟಿ ನೀಡಿದ್ದು, ದರ್ಶನ್ ಕುಟುಂಬದ ಸಂಪರ್ಕ ಮಾಡಿದ್ದೇವೆ. ಪ್ರಕರಣದ ಬಗ್ಗೆ ಅನುಮಾನ ಇದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

