ಧಾರವಾಡ: ಲಿಂಬಿ ಹಣ್ಣು ಹಾಗೂ ಕೋಳಿ ಮೋಟ್ಟೆ ಇಟ್ಟು ವಾಮಾಚಾರ ಮಾಡಿದ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದು. ಯಾವ ವಿಚಾರದಲ್ಲಿ ಈ ಮಾಟ ಮಂತ್ರ ಮಾಡಿದ್ದಾರೆ ಎಂದು ತಿಳಿದಿಲ್ಲ.
ಆದರೆ ರಾತ್ರಿ ಹೊತ್ತು ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಭಾನುವಾರ ನಡೆದಿದೆ. ವಾಮಾಚಾರ ಮಾಡಿಸಿದ ಕಿಡಿಗೇಡಿಗಳು, ಲಿಂಬೆಹಣ್ಣು, ತತ್ತಿ ಜೋಡಿ ಇಟ್ಟು ವಾಮಾಚಾರ ಮಾಡಿಸಲಾಗಿದ್ದು ಸಂಪೂರ್ಣ ಲಿಂಬೆಹಣ್ಣಿನ ಮೇಲೆ ತಿಳಿಯದ ಅಕ್ಷರಗಳನ್ನು ಸಹ ನಮೂದಿಸಿ ಈ ವಾಮಾಚಾರ ಮಾಡಲಾಗಿದೆ.
ನಗರದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಕಚೇರಿ ಮಧ್ಯದಲ್ಲಿ ವಾಮಾಚಾರ ಮಾಡಲಾಗಿದೆ. ಅಲ್ಲದೇ ನಿಂಬೆ ಹಣ್ಣಿನ ಮೇಲೆ ಬರೆದಿಟ್ಟು ಕಿಡಿಗೇಡಿಗಳು, ಕುಂಕುಮ ಹಾಕಿ ಪೂಜೆ ಮಾಡಿದ್ದಾರೆ. ಸಾರ್ವಜನಿಕರು ಮತ್ತು ಅಧಿಕಾರಿಗಳು ಈ ಮಾರ್ಗದಲ್ಲಿ ಹೆಚ್ಚು ಓಡಾಡುತ್ತಾರೆ. ಯಾವ ಉದ್ದೇಶಕ್ಕೆ ಈ ವಾಮಾಚಾರ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

