Breaking News

ಕೋವಿಡ್ : ಶೂನ್ಯ ಸಾವು ಕಂಡ ಕರುನಾಡು


ಬೆಂಗಳೂರು: ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಅಂದರೆ 2021ರ ಮಾಚ್‌ರ್‍, ಏಪ್ರಿಲ್‌, ಮೇ ಮತ್ತು ಜೂನ್‌ನಲ್ಲಿ ದಿನನಿತ್ಯ ನೂರಾರು ಸಾವು ವರದಿಯಾಗಿತ್ತು. ಆದರೆ 2022ರ ಜನವರಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ. ಕಳೆದ 9 ದಿನಗಳಿಂದ ದಿನನಿತ್ಯದ ಸಾವು ಒಂದಂಕಿಗೆ ಇಳಿದಿತ್ತು. ಇದೀಗ 646 ದಿನದ ಬಳಿಕ ರಾಜ್ಯ ಕೋವಿಡ್‌ ಸಾವು ಶೂನ್ಯ ದಾಖಲಾಗಿದೆ.

ರಾಜ್ಯದಲ್ಲಿ ಈವರೆಗೆ 40,018 ಮಂದಿ ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ದೇಶದಲ್ಲೇ ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 16,942 ಸಾವು ಸಂಭವಿಸಿದೆ. ಮೈಸೂರಿನಲ್ಲಿ 2,557 ಮತ್ತು ದಕ್ಷಿಣ ಕನ್ನಡದಲ್ಲಿ 1,838 ಸಾವು ಉಂಟಾಗಿದೆ. ಯಾದಗಿರಿಯಲ್ಲಿ ಅತಿ ಕಡಿಮೆ 212 ಸಾವು ದಾಖಲಾಗಿದೆ. ಇದೇ ವೇಳೆ ದಿನನಿತ್ಯದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇದೀಗ 150ರ ಅಸುಪಾಸಿಗೆ ಇಳಿದಿರುವ ಜೊತೆಗೆ ಕೋವಿಡ್‌ ಸಾವು ಕೂಡ ಕಡಿಮೆ ಆಗಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *