ಧಾರವಾಡ: ನಮ್ಮ ಜಿಲ್ಲೆಯಲ್ಲಿಯೂ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ ಇದರಿಂದ ಬಹಳ ರೈತರಿಗೆ ಅನಾನುಕೂಲ ಆಗಿದೆ ಎಂದು ಧಾರವಾಡ ಜಿಲ್ಲೆ ನವಲಗುಂದದಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ. ನವಲಗುಂದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಳ್ನಾವರ ಭಾಗಕ್ಕೆ ಈಗಾಗಲೇ ಭೇಟಿ ನೀಡಿದ್ದೇನೆ.
ಇವತ್ತು ನವಲಗುಂದ ಕ್ಷೇತ್ರದಲ್ಲಿ ಪರಿಶೀಲನೆ ಮಾಡುತ್ತೇನೆ. ಮುಂದೆ ಕುಂದಗೋಳ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಈಗಗಾಲೇ ಮನೆ ಬಿದ್ದ ಸ್ಥಳಕ್ಕೆ ಹೋಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಪಿಡಿಒ, ಗ್ರಾಮಲೆಕ್ಕಾಧಿಕಾರಿ ತತಕ್ಷಣ ವರದಿ ಮಾಡಬೇಕು ಎಂದು ಹೇಳಿದ್ದೇನೆ ಎಂದು ಹೇಳಿದರು. ಇನ್ನೂ ಬೆಣ್ಣೆಹಳ್ಳದ ನೀರು ಹರಿವು ಹೆಚ್ಚುವ ಆತಂಕದಲ್ಲಿದ್ದೇವೆ. ಮಳೆ ಹೆಚ್ಚಾದರೆ ಹರಿವು ಹೆಚ್ಚಾಗುತ್ತದೆ. ಬೆಣ್ಣೆಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಚಿಂತನೆ ನಡೆದಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




