ಎಅದ್ದೂರಿಯಾಗಿ ಮದುವೆಯಾಗಲು ಬ್ಯಾಂಕ್ ಸಿಬ್ಬಂದಿ ಜೊತೆಗೂಡಿ ಕೋಟ್ಯಂತರ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಮುರಗೋಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್ನಲ್ಲಿ ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಕಳ್ಳತನ ಮಾಡಿದ್ದ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4.37 ಕೋಟಿ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಬಸವರಾಜ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಸದ್ಯ ಹಣ, ಚಿನ್ನಾಭರಣವನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

