Breaking News

ನನ್ನ ಗಂಡನ ಪರ ನಿಲ್ಲುತ್ತೇನೆ, ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ’; ಮನು ಪತ್ನಿಯ ದೃಢ ನಿಲುವು.

ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಸಹಕಲಾವಿದೆ ಆಗಿದ್ದವರಿಂದಲೇ ಈ ರೀತಿಯ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮನು ಅವರ ಪತ್ನಿ ಮಾತನಾಡಿದ್ದಾರೆ.ನನ್ನ ಪತಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಗಂಡನ ಪರ ನಾನು ನಿಲ್ಲುತ್ತೇನೆ. ಅವನು ತಪ್ಪು ಮಾಡಿಲ್ಲ. ನ್ಯಾಯ ಸಿಗೋವರೆಗೆ ಹೋರಾಡುತ್ತೇನೆ’ ಎಂದಿದ್ದಾರೆ ಅವರು.ವೈಯಕ್ತಿಕ ವಿಷಯವನ್ನು ಅಲ್ಲಿಗೆ ಬಿಡಿ, ತನಿಖೆ ಆಗಲಿ. ಆದರೆ ಸಿನಿಮಾ ನೋಡಿ. ಹೆಣ್ಣುಮಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದಾಗ ಮನೆಗೆ ಕರೆದುಕೊಂಡು ಬಿಡುತ್ತಿದ್ದಾರೆ. ಹೆಣ್ಣನ್ನು ಕೇರ್‌ ಮಾಡಬೇಕು ಅಂತ ಈ ಥರ ಮಾಡಿದ್ದರು. ಆ ನಟಿಯು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ. ಇವೆಲ್ಲವೂ ಷಡ್ಯಂತ್ರ ಆಗಿರತ್ತೆ” ಎಂದು ಹೇಳಿದ್ದಾರೆ.ನನ್ನ ಗಂಡ ಈ ರೀತಿ ಮಾಡ್ತಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್‌ ರಿಹರ್ಸಲ್‌ ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು” ಎಂದು ಹೇಳಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *