Breaking News

ಮಕ್ಕಳು ನೈತಿಕ ಶಿಕ್ಷಣ, ಧರ್ಮದ ಪಾಠ ಕಲಿಯಬೇಕು: ಪ್ರಹ್ಲಾದ ಜೋಶಿ ಅಭಿಪ್ರಾಯ

ಹುಬ್ಬಳ್ಳಿ: ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವುದರಲ್ಲಿ ತಪ್ಪೆನಿಲ್ಲ. ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಕೆಲ ವಿಚಾರಗಳು ಮಕ್ಕಳಿಗೆ ತಿಳಿಯಬೇಕು. ನೈತಿಕ ಶಿಕ್ಷಣ, ಧರ್ಮ ಕಲಿಯಬೇಕು. ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,‌ ನಾನು ಇದನ್ನು ಸ್ವಾಗತ ಮಾಡುತ್ತೇನೆ‌. ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ವಾಗತ ಮಾಡಿದರೇ ಅವರಿಗೆ ಸದ್ಬುದ್ಧಿ ಬಂದಿದೆ ಎಂದು ಅದನ್ನೂ ಕೂಡಾ ಸ್ವಾಗತ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾಶ್ಮೀರಿ ಪೈಲ್ ಚಿತ್ರ ವಿವಾದ ವಿಚಾರವಾಗಿ ಮಾತನಾಡಿದ ಅವರು, ಅದರ ನಿರ್ಮಾಪಕರು ಬಿಜೆಪಿಯವರಲ್ಲ. ಈ ಸುಡೋ ಸೆಕ್ಯೂಲರ್ ಗಳು ಅದನ್ನು ಬಿಂಬಿಸುತ್ತಿದ್ದಾರೆ. ನರಹತ್ಯೆ ಆಗಿರುವುದನ್ನ ತೊರಿಸಿದ್ದಾರೆ. ಅದು ಕೇವಲ ಸಿನಿಮಾ ಅಂತ ಮಾಡಿದ್ದರು. ಯಾವಾಗ ಅದು ಜನಪ್ರಿಯತೆ ಪಡೆಯಿತೋ ಅವಾಗ ಅವರನ್ನು ಬಿಜೆಪಿ ಅಂದರು. ಇತಿಹಾಸ ಕರಾಳತೆ ನಮಗೆ ಪಾಠ ಆಗಬೇಕು. ದೇಶದ ಗೌರವಾನ್ವಿತ ನಾಗರಿಕರು ರಸ್ತೆ ಬದಿ ಬಂದು ಜೀವನ ಮಾಡಿದ್ದು,‌ ಇತಿಹಾಸದಲ್ಲಿ ಎಂದೂ ಆಗಿಲ್ಲ.‌ಬೇರೆ ಹತ್ಯಾಕಾಂಡ ಚಿತ್ರಗಳು ಬರಲಿ.‌ ಅವು ಬಂದಾಗ ಅವಾಗಿನ ಸರ್ಕಾರಗಳು ಏನ್ ಮಾಡ್ತಾವೋ ನೋಡೊಣ ಎಂದರು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *