ಹುಬ್ಬಳ್ಳಿ: ಏ .2 ರಂದು ಸಂಜೆ 5-30ಕ್ಕೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ರಥೋತ್ಸವ ಜರುಗಲಿದೆ.
ಸದ್ಗುರು ಸಿದ್ದೇಶ್ವರರ 101 ನೇ ವರ್ಷದ ಪುಣ್ಯಾರಾಧನೆಯ ನಿಮಿತ್ತ ದಿ .21 ರಿಂದ ಏ .1 ರ ವರೆಗೆ ಹೊಸಳ್ಳಿ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಮಹಾಸ್ವಾಮಿಗಳಿಂದ ದಿನಂಪ್ರತಿ 6-30ಕ್ಕೆ ಪ್ರವಚನ ನಡೆಯಲಿದ್ದು ಉದ್ಘಾಟನೆ ಯನ್ನು ನಾಳೆ ಸಂಜೆ ಮೂರುಸಾವಿರಮಠದ ಜಗದ್ಗುರುಗಳು ನೆರವೇರಿಸುವರು.
ಸಾಮೂಹಿಕ ವಿವಾಹ ಅಲ್ಲದೇ ಭಜನಾ ಸ್ಪರ್ಧೆ , ಹಿರಿಯರಿಗೆ , ಸಾಧಕರಿಗೆ ಸನ್ಮಾನ , ಬಯಲು ಕುಸ್ತಿ , ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಂಪ್ರತಿ ನಡೆಯಲಿದ್ದು ವಿವಿಧ ಮಠಾಧೀಶರು , ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಿದ್ದೇಶ್ವರ ಸ್ವಾಮಿಗಳ ಟ್ರಸ್ಟ್ ( ಹೊಸಮಠ ) ದ ಅಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

