Breaking News

ಮೇಕೆದಾಟು ಯೋಜನೆಗೆ ಕುರಿತು ಡಿಕೆಶಿ ಧಾರ್ಮಿಕ ಮುಖಂಡರ ಭೇಟಿ


ಬೆಂಗಳೂರು: ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು  ಜನವರಿ 9ರಿಂದ 19ರವರೆಗೆ 10 ದಿನಗಳ ಕಾಲ ಶತಾಯಗತಾಯ ನಡೆಸಲು ಕಾಂಗ್ರೆಸ್ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ.

ತಮ್ಮ ಪಾದಯಾತ್ರೆಗೆ ನಾಡಿನ ಮೂಲೆಮೂಲೆಯಿಂದ ಜನರನ್ನು, ಕಾರ್ಯಕರ್ತರನ್ನು ಮಾತ್ರ ಆಹ್ವಾನಿಸಿರುವುದಲ್ಲದೆ ಧಾರ್ಮಿಕ ಮುಖಂಡರನ್ನು ಕೂಡ ಕರೆದಿದ್ದಾರೆ.

ಧಾರ್ಮಿಕ ಮುಖಂಡರು ವೈಯಕ್ತಿಕವಾಗಿ ಪಾದಯಾತ್ರೆಯಲ್ಲಿ ಭಾಗಿಯಾಗದಿದ್ದರೂ ಕೂಡ ಕಾಂಗ್ರೆಸ್ ನಾಯಕರಿಗೆ ನೈತಿಕ ಬೆಂಬಲ ನೀಡುವ ಸಾಧ್ಯತೆಯಿದೆ. ಕೆಲವು ಸ್ಥಳೀಯ ಧಾರ್ಮಿಕ ಮುಖಂಡರು ರ್ಯಾಲಿ ಆರಂಭವಾಗುವ ನಾಡಿದ್ದು ಭಾನುವಾರ ಬೆಳಗ್ಗೆ ಆಗಮಿಸಿ ಆಶೀರ್ವಾದ ನೀಡುವ ಸಾಧ್ಯತೆಯಿದೆ.

Share News

About admin

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *