ಚಲಿಸುತ್ತಿದ್ದ NWKRTC ಬಸ್ಗೆ ಬೈಕ್ ಸವಾರ ಅಡ್ಡ ಬಂದಿದ್ದರು. ಆಗ, ಬಸ್ ಚಾಲಕ ನಿಧಾನವಾಗಿ ಹೋಗಪ್ಪ ಅಂತ ಬುದ್ದಿವಾದ ಹೇಳಿದ್ದಾರೆ. ಇಷ್ಟಕ್ಕೇ NWKRTC ಬಸ್ ಚಾಲಕನ ಜೊತೆ ಬೈಕ್ ಸವಾರ ವಾಗ್ವಾದಕ್ಕೆ ಇಳಿದಿದ್ದಾನೆ. ಚಾಲಕನಿಗೆ ನಿಂದಿಸಿ, ಬಳಿಕ ತನ್ನ ತಂದೆಗೆ ಕರೆ ಮಾಡಿದ್ದಾನೆ. ಜಗದಾಳ ಬಳಿ ಬೊಲೆರೊ ವಾಹನದಲ್ಲಿ ಜನರನ್ನು ಕರೆತಂದು ಚಾಲಕ ಮತ್ತು ನಿರ್ವಾಹಕರ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

