ಬೆಂಗಳೂರು: ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯವು ತಾಲೂಕಿಗೂ ವಿಸ್ತರಿಸುತ್ತದೆ. ಬಳಿಕ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ ಎಲ್ಲದಕ್ಕೂ ಒಂದೊಂದು ವಿವಿಗಳು ಬರಬಹುದು ಎಂದು ಮಾಜಿ ಸಚಿವ ಕೆ. ಆರ್. ರಮೇಶ್
ಕುಮಾರ್ ವ್ಯಂಗ್ಯವಾಡಿದ್ದಾರೆ.
ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಮಾಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದರು. ಜಿಲ್ಲೆಗೊಂದು ವಿವಿ ಬೇಡಿಕೆ ಬರುವುದನ್ನು ಪೂರೈಸಲು ಸರಕಾರ ಮುಂದಾಗುತ್ತಿದೆ. ಇದು ತಾಲೂಕುಗೂ ವಿಸ್ತರಿಸಬಹುದು. ಮುಂದೆ ಸೌತೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸೇರಿ ಒಂದೊಂದು ತರಕಾರಿಗೂ ಒಂದೊಂದು ವಿವಿಗಳು ಬರಬಹುದು. ವಿಶ್ವ ವಿದ್ಯಾನಿಲಯಗಳ ಕುಲಪತಿಗಳಾಗಲು ಕೆಲವರು ಕಾದು ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

