ಮುಖೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಶತಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಅವರು ಹೊಂದಿದ್ದಾರೆ. ಅವರ ಐಷಾರಾಮಿ ಜೀವನಶೈಲಿ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ. ಮುಖೇಶ್ ಅಂಬಾನಿ ಕುಟುಂಬ ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ವಾಸವಾಗಿದೆ. ಅಲ್ಲಿ ಕೆಲಸ ಮಾಡುವ ಚಾಲಕರಿಗೇ ಲಕ್ಷಾಂತರ ರೂಪಾಯಿ ಸಂಬಳ ನೀಡುವ ಮುಕೇಶ್ ಅಂಬಾನಿ ಎಷ್ಟೇ ಹಣವಿದ್ರೂ ಅದನ್ನು ತೋರಿಕೆಗೆ ಬಳಕೆ ಮಾಡೋದಿಲ್ಲ. ಮುಕೇಶ್ ಅಂಬಾನಿ ಅವರ ಜೀವನ ತುಂಬಾ ಸರಳವಾಗಿದೆ. ಸಾಮಾನ್ಯರಂತೆ ಜೀವನ ನಡೆಸಲು ಅವರು ಇಷ್ಟಪಡ್ತಾರೆ.
ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಜೀವನಶೈಲಿ, ಅವರ ಕಾರು, ಅವರ ಸಿಬ್ಬಂದಿ, ಅವರ ಕೆಲಸದ ಬಗ್ಗೆ ಸದಾ ಸುದ್ದಿಗಳು ಬರ್ತಿರುತ್ತವೆ. ಕೆಲ ದಿನಗಳ ಹಿಂದೆ ಮುಖೇಶ್ ಅಂಬಾನಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮುಖೇಶ್ ಅಂಬಾನಿ ಊಟದ ಬಗ್ಗೆ ಟ್ವಿಟ್ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





