ಹುಬ್ಬಳ್ಳಿ : ಕಂಪನಿಯ ಹೆಸರು ಹೇಳಿ ಕರೆ ಮೂಲಕ ಮಹಿಳೆಯನ್ನು ಯಾಮಾರಿಸಿ ಯುವತಿಗೆ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾ ನಗರದಲ್ಲಿ
ನಡೆದಿದೆ.
ಗೋನೈಸ್ ಕಂಪನಿಯ ಪ್ರತಿನಿಧಿಯೆಂದು ಯುವತಿಯನ್ನು ನಂಬಿಸಿ ಅಪರಿಚಿತ ಮಹಿಳೆ ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಾ ಎಂದು ನಂಬಿಸಿ ಯುವತಿಗೆ 60,284 ರೂ ವಂಚಿಸಿದ್ದಾರೆ. ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಲಕ್ಕಿಡಾಗೆ ಆಯ್ಕೆಯಾಗಿದ್ದಿರಿ 4,999 ಮೌಲ್ಯದ ಉಪಕರಣಗಳನ್ನು ಖರೀದಿ ಮಾಡಿದರೆ ಟಿವಿ , ಪ್ರಿಡ್ಜ್ ಲ್ಯಾಪಟಾಪ್ , ಎಸಿ ಮತ್ತು ಐಪೋನ್ ಒಂದು ಗೀಫ್ಟ್ ಹ್ಯಾಂಪರ್ ದೊರೆಯುತ್ತದೆ ಎಂದು ನಂಬಿಸಿದ್ದಾಳೆ.ನಂತರ ಇದನ್ನು ನಂಬಿದ ಯುವತಿ 5,488 ರೂ ಮೌಲ್ಯದ ಇಯರ್ ಪ್ಯಾಡ್ ಖರೀದಿಸಿದ್ದಾರೆ . ಇದಾದ ಬಳಿಕ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ ನಿಮ್ಮಆರ್ಡರ್ ಪಡೆಯಲು 9,845 ರೂ.ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಎಂದು ಹೇಳಿದ್ದಾನೆ . ಅಷ್ಟೇ ಅಲ್ಲದೆ ಯುವತಿ ಬ್ಯಾಂಕ್ ಖಾತೆಯಿಂದ 35 , 097 ರೂ . ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

