ಆನೇಕಲ್: ಪುಟ್ಟ ಬಾಲಕಿಯ ಮೇಲೆ ದೊಡಪ್ಪ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ನೆರಳೂರಿನಲ್ಲಿ ಬೆಳಕಿಗೆ ಬಂದಿದೆ .
ಎರಡು ವರ್ಷದ ಬಾಲಕಿ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿ , ಪೈಶಾಚಿಕವಾಗಿ ವರ್ತಿಸಿರುವುದರಿಂದ ತೀವ್ರ ರಕ್ತಸ್ರಾವವಾಗಿ ಬಾಲಕಿ ನಿಧನ ಹೊಂದಿದೆ.
ಕಾಮುಕ ದೀಪು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಬಂಧದಲ್ಲಿ ಮಗಳಾಗುವ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯು ನಂತರ ಫುಡ್ ಪಾಯಿಸನ್ ಆಗಿದೆ ಮತ್ತು ಅಪಘಾತವಾಗಿದೆ ಎಂಬಂತೆ ಬಿಂಬಿಸುವ ನಾಟಕವಾಡಿದ್ದಾನೆ . ಮರಣೋತ್ತರ ಪರೀಕ್ಷೆ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ . ಹೀಗಾಗಿ ಆರೋಪಿ ದೊಡ್ಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

