Breaking News

ಕರೆಯಲ್ಲಿ ಪ್ರಾರಂಭವಾದ ಪ್ರೇಮ : ಸಾವಿನಲ್ಲಿ ಅಂತ್ಯ


ಜೈಪುರ : ಫೋನ್ ಕರೆಯಲ್ಲಿ ಪ್ರಾರಂಭವಾದ ಪ್ರೇಮಿಗಳಿಬ್ಬರ ಲವ್ ಸಣ್ಣ ಜಗಳವಾಗಿದ್ದು, ಸಾವಿನಲ್ಲಿ ಅಂತ್ಯವಾದ ದುರಂತ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.

ಮುಜಾಫರ್‌ಪುರದ 23 ವರ್ಷದ ಅಂಜಲಿ ಮತ್ತುಜೈಪುರ ದಲ್ಲಿ ನೆಲೆಸಿದ್ದ ವಿವೇಕ್ ಮೃತ ಪ್ರೇಮಿಗಳು .ಇವರಿಬ್ಬರು ಶಾಲಾ ದಿನಗಳಿಂದ ಗೆಳೆಯರಾಗಿದ್ದರು.ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು . ಸಾಯುವ ಮುನ್ನ ಅಂಜಲಿ ಚಾರ್ಟೆಡ್ ಅಕೌಂಟೆಂಟ್ ( ಸಿಎ ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು . ವಿವೇಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದ . ಇದೀಗ ಸಾವಿನಲ್ಲಿ ಅಂತ್ಯ ಕಂಡಿದೆ.

ಘಟನೆ : ಕಳೆದ ಬುಧವಾರ ರಾತ್ರಿ ಫೋನ್ ಕರೆಯಲ್ಲಿ ವಿವೇಕ್ ಮತ್ತು ಅಂಜಲಿ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿತ್ತು . ಅದಾದ ಬಳಿಕ ಅಂಜಲಿ ಅಂದು ರಾತ್ರಿಯೇ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು . ಈ ವಿಷಯ ಮರುದಿನ ಬೆಳಿಗ್ಗೆ ಜೈಪುರದಲ್ಲಿದ್ದ ವಿವೇಕ್ ಗೆ ಗೊತ್ತಾಗಿದೆ . ಹಾಗಾಗಿ , ಆತನೂ ಕಟ್ಟಡದ 8 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *