Breaking News

ತುಮಕೂರು

ಕೇಬಲ್ ಕಳ್ಳನನ್ನು ಹಿಡಿದು ಕೇಬಲ್ ನಿಂದಲೇ ಕಟ್ಟಿಹಾಕಿದ ಗ್ರಾಮಸ್ಥರು!

ಶ್ರೀಕಾಂತ್ ಎಂಬುವನ ಜಮೀನಿನಲ್ಲಿ ಕೇಬಲ್ ಕಳವು ಮಾಡಿ ಚೀಲಕ್ಕೆ ಹಾಕಿಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯರು ಅನುಮಾನಗೊಂಡು ತಡೆದಿದ್ದಾರೆ.ಈ ವೇಳೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅಷ್ಟರಲ್ಲಿ ಆತನನ್ನು ಹಿಡಿದು ಚೀಲ ಪರಿಶೀಲಿಸಿದಾಗ ಕೇಬಲ್ ಗಳು ಪತ್ತೆಯಾಗಿದೆ. ಸದ್ಯ ಅದೇ ಕೇಬಲ್ ನಿಂದ ಆರೋಪಿಯನ್ನು ಮರಕ್ಕೆ ಕಟ್ಟಿ ಛೀಮಾರಿ ಹಾಕಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Read More »

ಅಮೃತ ಭಾರತ ನಿಲ್ದಾಣ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಲಿದೆ….

ಅಮೃತ ಭಾರತ ನಿಲ್ದಾಣ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಲಿದೆ. ಕಲ್ಪತರು ನಾಡಿನ ಹೊಸ ರೈಲ್ವೆ ನಿಲ್ದಾಣ ಸಾಕಷ್ಟು ಹೈಟೆಕ್ ಆಗಿರಲಿದ್ದು, ಇದರ ವಿಡಿಯೋವನ್ನು ನೈಋತ್ಯ ರೈಲ್ವೆ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.ತುಮಕೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಪರಿವರ್ತನೆಗೆ ಸಾಕ್ಷಿಯಾಗಿ, ಅಮೃತ್ ಭಾರತ್ ನಿಲ್ದಾಣಗಳ ಯೋಜನೆಯಡಿ ಅಭಿವೃದ್ಧಿಯನ್ನು ಬಿಂಬಿಸುವ ದರ್ಶನ.” ಎನ್ನುವ ಶೀರ್ಷಿಕೆಯಡಿ ಹೊಸ ರೈಲ್ವೆ ನಿಲ್ದಾಣ ಹೇಗಿರಲಿದೆ ಎನ್ನುವ ವಿಡಿಯೋವನ್ನು ಹಂಚಿಕೊಂಡಿದೆ.ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ನಗರದಲ್ಲಿ ರೈಲ್ವೆ …

Read More »

ಮೂಢನಂಬಿಕೆಗೆ ನವಜಾತ ಶಿಶುವೊಂದು ಮೃತ…

ತುಮಕೂರು : ಮೂಢನಂಬಿಕೆಗೆ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿನಂತೆ ಮಗು ಮತ್ತು ತಾಯಿಯನ್ನು ಊರ ಹೊರಗಡೆ ಇರುವ ಗುಡಿಸಲಿನಲ್ಲಿ ಇರಿಸಲಾಗಿತ್ತು. ಇವರ ಕಟ್ಟುಪಾಡಿಗೆ ವಸಂತ ಎಂಬವರ ಅವಳಿ ಮಕ್ಕಳಲ್ಲಿ 10 ದಿನಗಳ ಹೆಣ್ಣು ಮಗುವೊಂದು ಸಾವಿಗೀಡಾಗಿದೆ. ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಗ್ರಾಮದ ಒಳಗೆ ಸೇರಿಸದೆ ಊರವರೆಗಿನ ಗುಡಿಸಲಿನಲ್ಲಿ ವಾಸ ಮಾಡಲು ಸೂಚಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು …

Read More »

ವೃದ್ಧೆಯ ಹತ್ತಿರ ಇದ್ದ ಹಣ ಬಂಗಾರ ಕಳ್ಳತನ ಮಾಡಿದ ಖದೀಮರು

ಕೊರಟಗೆರೆ: ತಾಲೂಕಿನ ಕಾಲೋನಿ, ನಾಗೇನಹಳ್ಳಿ ಸೇರಿದಂತೆ ಭೈರೇನಹಳ್ಳಿ ಕ್ರಾಸ್ ಬಳಿ ಸರಣಿ ಕಳ್ಳತನ ನಡೆದಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳರು ಕಳ್ಳತನ ನಡೆಸಿರುವುದಲ್ಲದೇ ಬೆಳಗ್ಗಿನ ವೇಳೆ ವೃದ್ದೆಯ ಕೊರಳಲ್ಲಿದ್ದ ಚೈನ್ ಕಸಿದು ಪರಾರಿಯಾದ ಘಟನೆ ಕೂಡ ನಡೆದಿದೆ. ಕಾಲೋನಿಯಿಂದ ಕೊರಟಗೆರೆಗೆ ಬರುವ ಮಾರ್ಗ ಮಧ್ಯದ ರಸ್ತೆ ಬದಿಯ ಐದು ಅಂಗಡಿಗಳಲ್ಲಿ ತಡ ರಾತ್ರಿ ಕಳ್ಳತನ ನಡೆಸಲಾಗಿದ್ದು, ಸಿಲಿಂಡರ್,ಗುಟ್ಕಾ, ಸಿಗರೇಟ್, ನಗದು ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.ಕಳ್ಳತನ ಮಾಡಿರುವ ಪ್ರತಿಯೊಂದು ಅಂಗಡಿಗಳಲ್ಲಿ ಬೆಲೆ …

Read More »

ಪಾವಗಡದಲ್ಲಿ ವಿಶ್ವ ಅತಿದೊಡ್ಡ ಸೋಲಾರ್ ಪಾರ್ಕ್ ಸ್ಥಾಪನೆ , ಸ್ಥಳಕ್ಕೆ ಬೇಟಿ ನೀಡಿದ, ಡಿ.ಕೆ.ಶಿವಕುಮಾರ್

ತುಮಕೂರು ಜಿಲ್ಲೆಯ ಪಾವಗಡ ಸೋಲಾರ್‌ ಪಾರ್ಕ್‌ಗೆ ಇಂದು ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್‌ ಅವರೊಂದಿಗೆ ತೆರಳಿದೆ. ಕರ್ನಾಟಕದ ವಿದ್ಯುತ್‌ ಅಭಾವವನ್ನು ನೀಗಿಸುತ್ತಿರುವ ಈ ಸೋಲಾರ್‌ ಪಾರ್ಕ್‌ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್‌ ಸ್ಥಾವರಗಳ ಪೈಕಿ ಒಂದಾಗಿರುವುದು ಹೆಮ್ಮೆಯ ವಿಚಾರ.

Read More »


ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಕಾರ್ಯಕರ್ತ ದುರಂತ ಸಾವು

ತುಮಕೂರು: ಕೊರಟಗೆರೆಯಲ್ಲಿ ನಿನ್ನೆ(ಬುಧವಾರ) ನಡೆದ ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ದುರಂತವೊಂದು ಸಂಭವಿಸಿದೆ. ವೇದಿಕೆಯಲ್ಲಿ ಭಾಷಣ ಮಾಡಿದ ಮರುಕ್ಷಣವೇ ಕಾರ್ಯಕರ್ತ ಪ್ರಾಣಬಿಟ್ಟಿದ್ದಾರೆ. ವೇದಿಕೆಯಲ್ಲೇ ಕುಸಿದುಬಿದ್ದ ಕಾರ್ಯಕರ್ತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಕ್ಯಾಷವಾರ ಗ್ರಾಮದ ಗ್ರಾಪಂ ಮಾಜಿ ಸದಸ್ಯ ನಾಗರಾಜಪ್ಪ (60)ಮೃತ. ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್​ ಸಂಸ್ಥಾಪನಾ ದಿನ ಹಾಗೂ ಎಸ್​ಟಿ-ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. …

Read More »

ಕೊರೊನಾ ರೂಪಾಂತರಿ ವೈರಸ್ BF.7 ಬಹಳ ವೇಗವಾಗಿ ಹರಡುತ್ತಿದೆ : ಆರೋಗ್ಯ ಸಚಿವ ಡಾ.ಸುಧಾಕರ್

ತುಮಕೂರು: ಕೊರೊನಾ ರೂಪಾಂತರಿ ವೈರಸ್ BF.7 ಬಹಳ ವೇಗವಾಗಿ ಹರಡುತ್ತಿದ್ದು, ಶೀಘ್ರದಲ್ಲಿಯೇ ರಾಜ್ಯಕ್ಕೂ ಎಂಟ್ರಿ ಕೊಡಬಹುದು ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವರು, ಕೋವಿಡ್ ಹೊಸ ತಳಿ BF.7 ಪತ್ತೆಯಾಗಿದ್ದು, ಬಹಳ ವ್ಯಾಪಕವಾಗಿ ಹರಡುತ್ತಿದೆ.ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಆತಂಕ ಸೃಷ್ಟಿ ಮಾಡಿದೆ. ಇನ್ನು 2-3 ತಿಂಗಳಲ್ಲಿ ಇಲ್ಲಿಗೂ ಎಂಟ್ರಿ ಕೊಡಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ವಹಿಸಿ …

Read More »

ತುಮಕೂರು ಜಿಲ್ಲೆಯಲ್ಲಿ  ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ : ಸಿಎಂ

ತುಮಕೂರು : ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇಂದು ಕುಣಿಗಲ್ ನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ತುಮಕೂರು ಜಿಲ್ಲೆಯ ಅಭಿವೃದ್ದಿ ದೃಷ್ಟಿ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು. ಇದರ ಜೊತೆ ಒಂದು ಸಾವಿರ ಎಕರೆಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತದೆ, …

Read More »

ಕ್ರೂಸರ್ ಗೆ ಲಾರಿ ಡಿಕ್ಕಿ: 9 ಜನರು ಸ್ಥಳದಲ್ಲೇ ಸಾವು

ತುಮಕೂರು : ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ತುಮಕೂರಿನಲ್ಲಿ ಕ್ರೂಸರ್ ಗೆ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಕ್ರೂಸರ್ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯವರಾಗಿದ್ದು, ಕ್ರೂಸರ್ ನಲ್ಲಿ 20 ಜನರ ಪೈಕಿ 9 ಜನರು ಮೃತಪಟ್ಟಿದ್ದಾರೆ.ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ …

Read More »

ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ ಇದೆ: ರಾಹುಲ್ ಗಾಂಧಿ

ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿಯ ಜನ್ಮದಿನೋತ್ಸವ ಹಿನ್ನೆಲೆ ನಿನ್ನೆ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ . ಹಿಂದೆ ನಾನು ಇಲ್ಲಿಗೆ ಬಂದಿದ್ದೆ . ನನ್ನ ಅಜ್ಜಿ , ತಂದೆ , ತಾಯಿಯೂ ಇಲ್ಲಿಗೆ ಭೇಟಿ ನೀಡಿದ್ದರು . ಹಾಗಾಗಿ , ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ . ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವಾಗುತ್ತಿದೆ. ಮಠದ ಸೇವೆ , …

Read More »