ಧಾರವಾಡ: ಹು- ಧಾ ಮಹಾನಗರ ವ್ಯಾಪ್ತಿಯ ವಾರ್ಡ್ ನಂ 27 ರ
ನವನಗರದ ಪೊಲೀಸ್ ಠಾಣೆ ಹಿಂಬದಿಯ ಪಾಲಿಕೆ ನಿವೇಶನ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಸಲಾಯಿತು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಮಾಧವ ಗಿತ್ತೆ , ಹಾಗೂ ನವನಗರ ಸಹಾಯಕ ಆಯುಕ್ತ ರಮೇಶ್ ನೂಲ್ವಿ ನೇತೃತ್ವದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಕಾರ್ಯಚರಣೆ ನಡೆಸಲಾಯಿತು.
ವ್ಯಾಪಾರ ನಡೆಸಲು ಅನುಮತಿ ಪಡೆದಿದ್ದ ಕೇವಲ ಐವರು , ಅನಧಿಕೃತವಾಗಿ 20 ಕ್ಕೂ ಹೆಚ್ಚು ಅಂಗಡಿಗಳಿಗೆ ಭಾಡಿಗೆ ನೀಡಿದ್ದರು . ಎಲ್ಲ ಅನಧಿಕೃತ ಡಬ್ಬಾ ಅಂಡಗಿಗಳನ್ನು ತೆರವುಗೊಳಿಸಲಾಗುತ್ತಿದೆ . ಬಾಕಿ ಇರುವ ಅಕ್ರಮ ತರಕಾರಿ ಅಂಗಡಿಗಳಿಗೆ ಸೋಮವಾರದವರೆಗೆ ಅವಕಾಶ ನೀಡಲಾಗಿದೆ . ಆ ನಂತರ ಅವುಗಳನ್ನೂ ಖಾಲಿ ಮಾಡಿಸಲಾಗುವುದು ಎಂದು ಸಹಾಯಕ ಆಯುಕ್ತ ರಮೇಶ್ ನೂಲ್ವಿ ತಿಳಿಸಿದ್ದಾರೆ.
ತರಕಾರಿ ಮಾರಾಟಕ್ಕಾಗಿಯೆ ಬೃಹತ್ ಶೆಡ್ ನಿರ್ಮಿಸಲಾಗಿದ್ದರೂ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ . ಈಗ ಶೆಡ್ ಮತ್ತೆ ಸುಸಜ್ಜಿತಗೊಳಿಸಿ ಅಲ್ಲಿಯೇ ತರಕಾರಿ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. ಇದಲ್ಲದೆ ಈಗ ತೆರವು ಮಾಡಲಾಗುತ್ತಿರುವ ಸ್ಥಳದಲ್ಲಿ ಪೇವರ್ಸ್ ಹಾಕಿ ವ್ಯವಸ್ಥಿತವಾಗಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಲಾಗುವುದು . ಪ್ರತಿಯೊಬ್ಬರಿಗೂ ನಿರ್ದಿಷ್ಟ ಜಾಗೆ ಗುರುತಿಸಿಕೊಡಲಾಗುವುದು . ಅಲ್ಲಿಯೇ ಅವರು ವ್ಯಾಪಾರ ಮಾಡಬೇಕು . ಯಾವುದೇ ಅನಧಿಕೃತ ಅಂಗಡಿಗಳಿಗೆ ಅವಕಾಶವಿಲ್ಲ . ಲೈಸೆನ್ಸ್ ಪಡೆದವರು ಬೇರೆಯವರಿಗೆ ಭಾಡಿಗೆಗೆ ನೀಡುವಂತಿಲ್ಲ , ಖುದ್ದಾಗಿ ಅವರೆ ಅಂಗಡಿ ನಡೆಸಬೇಕಾಗುತ್ತೆ . ಬೇರೆ ಯಾರಿಗಾದರೂ ಅಕ್ರಮವಾಗಿ ಭಾಡಿಗೆ ನೀಡಿದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲಗುತ್ತದೆ ಎಂದು ತೆರವುಗೊಳಿಸಲಾಗುವುದುದೆಂದು ಹೆಚ್ಚುವರಿ ಆಯುಕ್ತ ಮಾಧವ ಗಿತ್ತೆ , ಹಾಗೂ ಸಹಾಯಕ ಆಯುಕ್ತ ರಮೇಶ್ ನೂಲ್ವಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

