Breaking News

ಕಾಮಗಾರಿ ಭ್ರಷ್ಟಾಚಾರ ನಿಗ್ರಹದಳ ಸ್ಥಾಪಿಸಲು ಆಗ್ರಹ

ಹುಬ್ಬಳ್ಳಿ: ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಭ್ರಷ್ಠಾಚಾರವನ್ನು ವ್ಯಾಪಕವಾಗಿ ಅನುಬವಿಸುತ್ತಿದ್ದಾರೆ ಎಂದು ಹು-ಧಾ ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘವು ಹು-ಧಾ ಮಹಾನಗರ ಪಾಲಿಗೆ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಸರ್ಕಾರಿ ಟೆಂಡರಗಳನ್ನು ಪಾರದರ್ಶಕ ವಾಗಿ ಇ- ಟೆಂಡರ್ ಮೂಲಕ ಪಡೆದು ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ತಿರ್ವ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ, ರಾಜಕಾರಣಿಗಳು ಅಧಿಕಾರಿ ವೃಂದದಿಂದ ಹಣಕ್ಕಾಗಿ ಗುತ್ತಿಗೆದಾರರನ್ನು ಹೈರಾಣು ಗೋಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬ್ರಷ್ಟ ವ್ಯವಸ್ಥೆ ಗೆ ಬಲಿಪಶುವಾಗಿ ಆತ್ಮಹತ್ಯೆ ಮಾಡಿಕೋಂಡ ಸಂತೋಷ್ ಪಾಟಿಲ್ ಅವರ ಕುಟುಂಭಕ್ಕೆ ೧೦ ಕೋಟಿ ರೂ ಗಳನ್ನು ಪರಿಹಾರರೂಪದಲ್ಲಿ ಕೋಡಬೇಕು ಮತ್ತು ಸಂತೋಷ್ ಪಾಟೀಲ್ ಪತ್ನಿ ಗೆ ಸರ್ಕಾರಿ ಹುದ್ದೆಯನ್ನು ಕೋಡಬೇಕು ಎಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈಗ ಇದ್ದ ೫೦ ಕೋಟಿ ಕಾಮಗಾರಿಗ ಅನುಷ್ಠಾನ ದಲ್ಲಿ ನಿವೃತ್ತ ನಾಯಧಿಶರ ಸಮಿತಿ ನೇಮಕ ಮಾಡಲು ಆಶ್ವಾಸನೆಯನ್ನು ಮುಖ್ಯಮಂತ್ರಿ ಗಳು ನಿಡಿದ್ದರು, ಅದನ್ನು ಕೈ ಬಿಟ್ಟು ಎಲ್ಲ ಮೊತ್ತದ ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ತರಬೇಕು ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು.
ಈಗ ಇರುವ ಕರ್ನಾಟಕ ಲೋಕಾಯುಕ್ತ ಮತ್ತು ಬ್ರಷ್ಟಾಚಾರ ನಿಗ್ರಹ ದಳ ಇರುವಂತೆ ಕಾಮಗಾರಿ ಬ್ರಷ್ಟಾಚಾರ ನಿಗ್ರಹದಳವನ್ನು ಸ್ಥಾಪಿಸಬೇಕು ಎಂದು ಹು-ಧಾ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *