Breaking News

ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ: ವ್ಲಾಡಿಮಿರ್ ಪುಟಿನ್.

ವ್ಲಾಡಿವೋಸ್ಟಾಕ್ (ರಷ್ಯಾ): ರಷ್ಯಾದ ಬಂದರು ಪಟ್ಟಣ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ (ಇಇಎಫ್‌) ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ನೀತಿಯನ್ನು ಶ್ಲಾಘಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಷ್ಯಾ ನಿರ್ಮಿತ ಕಾರುಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, “ನಮ್ಮಲ್ಲಿ ಆಗ (90 ರ ದಶಕದಲ್ಲಿ) ದೇಶೀಯವಾಗಿ ತಯಾರಿಸಿದ ಕಾರುಗಳು ಇರಲಿಲ್ಲ. ಆದರೆ ನಾವು ಈಗ ಉತ್ಪಾದನೆ ಮಾಡುತ್ತಿದ್ದೇವೆ. 1990ರ ದಶಕದಲ್ಲಿ ನಾವು ಅಪಾರ ಪ್ರಮಾಣದಲ್ಲಿ ಖರೀದಿಸಿದ ಮರ್ಸಿಡಿಸ್ ಅಥವಾ ಔಡಿ ಕಾರುಗಳಿಗಿಂತ ಅವು ಹೆಚ್ಚು ಸಾಧಾರಣವಾಗಿ ಕಾಣುತ್ತವೆ ಎಂಬುದು ನಿಜ. ಆದರೆ ಇದು ಸಮಸ್ಯೆ ಅಲ್ಲ. ನಮ್ಮ ಅನೇಕ ಪಾಲುದಾರರನ್ನು ನಾವು ಅನುಕರಿಸಬೇಕು ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ, ಭಾರತ. ಅವರು ಭಾರತೀಯ ನಿರ್ಮಿತ ವಾಹನಗಳ ತಯಾರಿಕೆ ಮತ್ತು ಬಳಕೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಹಾಗಾಗಿ ನಾವು ರಷ್ಯಾ ನಿರ್ಮಿತ ಆಟೋಮೊಬೈಲ್‌ಗಳನ್ನು ಬಳಸುವುದು ಸೂಕ್ತ” ಎಂದು ಸಲಹೆ ನೀಡಿದರು.

Share News

About BigTv News

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *