Breaking News

ನ್ಯಾಯಕ್ಕಾಗಿ ನೊಂದ ಬಡ ಕುಟುಂಬ ಪರಿಹಾರಕ್ಕೆ ಮನವಿ

ಹುಬ್ಬಳ್ಳಿ: ವಾಣಿಜ್ಯ ನಗರದ ಉಮಚಗಿ ಗ್ರಾಮದ ವೀರನಗೌಡ ಪಾಟೀಲ, ಪುತ್ರ ರಾಯನಗೌಡ ಪಾಟೀಲ 2016ರಲ್ಲಿ ಊರಿನ ಪಕ್ಷದಲ್ಲೇ ನಾಲ್ಕು ಗುಂಟೆ ಜಾಗ ಖರೀದಿ ಮಾಡಿದೆ. ಆದ್ರೆ ರಾಯನಗೌಡ ಪಾಟೀಲ್ ಖರೀಸಿಸಿದ ಜಾಗದ ಪಕ್ಕ ದಲ್ಲೆ ಬಸವರಾಜ್ ಮಡಿವಾಳರ ಜಾಗ ಇದೆ. ಜೊತೆಗೆ ರಾಯನಗೌಡ ಸಂಬಂದಿಸಿದ ಜಾಗವನ್ನ ಅತಿಕ್ರಮಣ ಮಾಡಿದ್ದಾರೆ ಅನ್ನೋ ಆರೋಪ ರಾಯನಗೌಡ ಕುಟುಂಬಸ್ಥರದ್ದು.

ಇನ್ನೂ, ವೀರನಗೌಡ ಪಾಟೀಲ್ ಕುಟುಂಬದ ಜೊತೆ ಬಸವರಾಜ್ ಮಡಿವಾಳರ ಕುಟುಂಬ ಕಳೆದ ಮೂರು ತಿಂಗಳಿನಿಂದ ಕಲಹ ಮಾಡ್ತಿದೆಯಂತೆ. ಈ ಗಲಾಟೆ ಬಗ್ಗೆ ವೀರನಗೌಡ ಪಾಟೀಲ್ ಕುಟುಂಬ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರಂತೆ. ಜೊತೆಗೆ ಕಳೆದ 20 ದಿನದಿಂದ ಊರು ತೊರೆದಿದ್ದ ವೀರನಗೌಡ ಪುತ್ರ ರಾಯನಗೌಡ ಊರಿಗೆ ವಾಪಸ್ ಆಗಿದ್ದಾನೆ. ಇದನ್ನ ಗಮನಿಸಿದ ಬಸವರಾಜ್ ಮಡಿವಾಳರ ಕುಟುಂಬ ಕೊಡಲಿ, ದೊಣ್ಣೆ ಗಳಿಂದ ಹಲ್ಲೆ ಮುಂದಾಗಿದ್ದಾರೆ. ಈ ವೇಳೆ ವೀರನಗೌಡ ಪಾಟೀಲ್ ಕೈಗೆ ತೀವ್ರ ಗಾಯ ಆಗಿ ಹುಬ್ಬಳ್ಳಿ ಕಿಮ್ಸ್’ಗೆ ದಾಖಲಾಗಿದ್ದಾರೆ. ಇಷ್ಟೆಲ್ಲ ಗಲಾಟೆ ಬಳಿಕೆ ವೀರನಗೌಡ ಪಾಟೀಲ್ ಕುಟುಂಬ ಬಸವರಾಜ್ ಮಡಿವಾಳರ ಸೇರಿ ಏಳು ಜನರ ಮೇಲೆ ಕೊಲೆ ಯತ್ನ ದೂರು ದಾಖಲಾಗಿದ್ದು, ಅತ್ತ ಬಸವರಾಜ್ ಕುಟುಂಬ ಕೂಡಾ ಪ್ರತಿ ದೂರು ದಾಖಲಿಸಿದೆ.

ಸಾಲಸೋಲ ಮಾಡಿ ಬಡ ಕುಟುಂಬ ಭೂಮಿ ಖರೀದಿಸಿದೆ. ಆದ್ರೀಗ ಸ್ವಂತ ಜಾಗದಲ್ಲಿ ವಾಸ ಮಾಡೋಕೆ‌ ಆಗ್ತಿಲ್ಲ ಅಂತ ನೊಂದ ಕುಟುಂಬ ನಮಗಾದ ಅನ್ಯಾಯಕ್ಕೆ ನ್ಯಾಯ ಬೇಕು ಮನವಿ ಮಾಡ್ತಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *