ಧಾರವಾಡ: ಧಾರವಾಡದ ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ ಮಧ್ಯೆ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಅಮೋಲ್ ಕಾಳೆ, ಪ್ರವೀಣ ಚತುರ್, ಗಣೇಶ ಮಿಸ್ಕಿನ್, ಅಮಿತ್ ಬುದ್ಧಿ, ವಾಸುದೆವ ಸೂರ್ಯವಂಶಿ ಹಾಗೂ ಶರತ್ ಕಲಾಸ್ಕರ್ ಎಂಬ ಆರು ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಈ ಆರೂ ಜನ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿಕೊಂಡು ಬಂದಿದ್ದು ಗಮನಸೆಳೆದಿದೆ.
2015ರ ಆಗಸ್ಟ್ 30 ರಂದು ಧಾರವಾಡ ಕಲ್ಯಾಣನಗರದಲ್ಲಿ ಆರೋಪಿಗಳು ಕಲಬುರ್ಗಿ ಅವರ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಸದ್ಯ ಈ ಕೊಲೆ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳಿಗೆ ನ್ಯಾಯಾಲಯ ಯಾವ ಪ್ರಮಾಣದ ಶಿಕ್ಷೆ ವಿಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

