ಕುಂದಗೋಳ : ತಾಲೂಕಿನ ಎಲ್ಲೆಡೆ ಸುರಿದ ಭಾರಿ ಮಳೆ ಹಾಗೂ ಗುಡುಗು ಸಿಡಿಲಿನ ಹೊಡೆತಕ್ಕೆ 13 ಕುರಿಗಳು ಹಾಗೂ ಒಂದು ಕುದುರೆ ಮೃತಪಟ್ಟ ಘಟನೆ ದೇವನೂರು ಗ್ರಾಮದ ಹೊರವಲಯದಲ್ಲಿ ನಿನ್ನೆ ಸಂಜೆ ನಡೆದಿದೆ .
ದೇವನೂರು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ದೊಡ್ಡಿ ಹಾಕಿ ವಾಸವಿದ್ದ ಕುರಿಗಾಹಿಗಳ ಹಿಂಡಿಗೆ ಸಿಡಿಲು ಅಪ್ಪಳಿಸಿದ ಪರಿಣಾಮ 13 ಕುರಿಗಳು ಹಾಗೂ ಒಂದು ಕುದುರೆ ಸಿಡಿಲಿಗೆ ಬಲಿಯಾಗಿ ಮೃತಪಟ್ಟಿವೆ. ಬೆಳಗಾವಿ ಜಿಲ್ಲಾ ರಾಯಭಾಗದಿಂದ ಬಂದು ದೇವನೂರು ಗ್ರಾಮದ ಹೊರವಲಯದಲ್ಲಿ ವಾಸವಿದ್ದ ವಿಠಲ ಕಾಣಪ್ಪಲಟ್ಟಿ ಎಂಬ ಕುರಿಗಾಹಿಗೆ ಸೇರಿದ 13 ಕುರಿಗಳು ಹಾಗೂ ಒಂದು ಕುದುರೆ ಸಿಡಿಲು ಬಡಿದು ಸಾವನ್ನಪ್ಪಿದ್ದು ಕುರಿಗಾಹಿ ಕಂಗಾಲಾಗಿದ್ದಾರೆ ಕುಂದಗೋಳ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಕೂಡಲೇ ಮಳೆ ಬಂದರೆ ಊರಿಗೆ ಸೇರುವಂತೆ ಪೋಲಿಸರು ಸೂಚನೆ ನೀಡಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

