ಹುಬ್ಬಳ್ಳಿ : ಡಾ. ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣ ವಿಳಂಭ ಧೋರಣೆಗೆ ಸಂಬಂಧಿಸಿದಂತೆ ಶಾಸಕ ಪ್ರಸಾದ್ ಅಬ್ಬಯ್ಯ ಅವರು ನಾನೇ ಸ್ವಯಂ ಪ್ರೇರಣೆಯಿಂದ ಮಾಡಿಸುತ್ತೇನೆಂದು ಹೇಳುವ ಹೇಳಿಕೆ ಖಂಡನೀಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಡಾ. ವಿಜಯ ಗುಂಟ್ರಾಳ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಮಾದಿಗ ದಂಡೋರ ಸಮಿತಿ ವತಿಯಿಂದ ಡಾ. ಬಾಬುಜೀ ಭವನ ನಿರ್ಮಾಣ ಶೀಘ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಮಾಡಲಾಗಿತ್ತು. ಅಂದಿನ ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯ ಅವರಿಗೆ ಭವನದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ೨೦೧೭ ರಲ್ಲಿ ೬ ಕೋಟಿಯಿಂದ ೯.೧೫ ಕೋಟಿ ಅನುದಾನ ಮಂಜೂರು ಆಗಿದ್ದು, ೧೫ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ. ತದನಂತರ ೧೫ ದಿನಗಳ ಬಳಿಕ ಭವನ ನಿರ್ಮಾಣ ಕಾಮಗಾರಗೆ ಎಲ್ಲಿಗೆ ಬಂತು ಎಂದು ಪ್ರಶ್ನಿಸಿ, ದಲಿತ ಶಾಸಕರಿಂದ ದಲಿತರಿಗೆ ಅನ್ಯಾಯ ಆಗಬಾರದು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.
ಆದಾದ ಒಂದುವರೆ ತಿಂಗಳ ನಂತರ ಎಚ್.ಆಂಜನೇಯ. ಅವರು ಭೂಮಿ ಪೂಜೆ ನೆರವೇರಿಸಿದ್ದರು. ಇಷ್ಟೇಲ್ಲಾ ನಡೆದು ಭವನ ಕಾಮಗಾರಿ ಪ್ರಾರಂಭ ಮಾಡಿ ರೂ. ೪.೨೫ ಕೋಟಿ ವರೆಗಿನ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಡಾ. ಬಾಬುಜೀ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ತಮ್ಮದೇ ಸರ್ಕಾರದಲ್ಲಿ ಯಾಕೆ ಅನುದಾನ ಬಿಡುಗಡಗೊಳಿಸಿಲ್ಲ ಎಂದು ಪ್ರಶ್ನಿಸಿದರು.
೨೦೧೫ ರಲ್ಲಿ ಭವನ ನಿರ್ಮಾಣ ಮಾಡಲು ರೂ. ೧.೭೫ ಕೋಟಿ ಅನುದಾನ ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ೨೦೧೭-೧೮ ರಲ್ಲಿ ಭವನ ನಿರ್ಮಾಣ ಮೊತ್ತ ೮.೪೯ ಕೋಟಿ ಪೈಕಿ ಅನುದಾನ ರೂ. ೪.೨೫ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ದಿ.೭/೧/೨೦೨೨ ರಂದು ೮.೪೯ ಕೋಟಿ ಘಟನೋತ್ತರ ಆಡಳಿತ್ಮಕ ಮಂಜೂರಾತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ೩ ತಿಂಗಳು ಗತಿಸಿದರೂ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ಯಾಕೆ ನೀಡಿಲ್ಲ ಎಂದರು.
ಕಾಮಗಾರಿ ಆರಂಭವಾಗಿ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ.ಆದ್ದರಿಂದ ಅಬ್ಬಯ್ಯ ಅವರು ನಿರ್ಲಕ್ಷ್ಯ ಧೋರಣೆ ಮಾಡಿದ್ದು, ಮಾದಿಗ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದರು.
ಭವನದ ಯೋಜನೆ ತಾವೇ ತಂದಿದ್ದು ಎಂದು ಸರ್ವಾಧಿಕಾರಿಯಂತೆ ಮಾತನಾಡುತ್ತಿದ್ದು, ಮಾದಿಗ ಸಮುದಾಯಕ್ಕೆ ದಾರಿ ತಪ್ಪಿಸುತ್ತಿದ್ದು ಖಂಡನೀಯವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ. ಹುಬಳಿಕರ್, ವೆಂಕಟೇಶ ನೀರಗಟ್ಟಿ, ಗಂಗಾಧರ ಪೆರೂರ, ಮೇಘರಾಜ ಹಿರೇಮನಿ, ನಾಗರಾಜ ಟಗರಗುಂಟಿ ಸೇರಿದಂತೆ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

