Breaking News

ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ

ಧಾರವಾಡ: ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸಿ,ಐಪಿಸಿ 306ಪ್ರಕಾರಸಂತೋಷ ಪಾಟೀಲ ಅವರ ಆತ್ಮಹತ್ಯೆಯ ಸಂಬಂಧದಲ್ಲಿಬಂಧಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಬಿಜೆಪಿ ಕಾರ್ಯಕರ್ತರೂ ಹಾಗೂ ಗುತ್ತಿಗೆದಾರರಾಗಿದ್ದಸಂತೋಷ ಪಾಟೀಲ ಅವರು ತಮ್ಮ ಡೆತ್ ನೋಟ್ ದಲ್ಲಿ ಕಾಮಗಾರಿಗಾಗಿ ಶೇ. 40 ಕಮಿಷನ್ ಕೇಳಿ ಕಿರುಕುಳ ಕೊಟ್ಟಿದ್ದ ಕಾರಣ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರೋಪಿಸಿ ತಮ್ಮ ಡೆತ್ ನೋಟ್ ನ್ನು ಮಾಧ್ಯಮದವರಿಗೆ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ ಪಾಟೀಲ ಸಹೋದರ ಪ್ರಶಾಂತ ಪಾಟೀಲ ಮಾಧ್ಯಮಕ್ಕೆ ತಿಳಿಸುತ್ತಾ ಈ ಮುಂಚೆ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಅವರ ಅಪ್ತ ಬಸವರಾಜ ರಮೇಶ ಅವರು ರಸ್ತೆ ಕಾಮಗಾರಿಗ
4ಕೋಟಿ ಬಿಡುಗಡೆ ಮಾಡಲು 40% ಕಮಿಷನ್ ಲಂಚ ಕೇಳುತ್ತಿದ್ದಾರೆ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೂ ಸಹ ಯಾವುದೇ ಪ್ರತಿಕ್ರಿಯೆ ಸಿಗದ್ರಸಚಿವರ ಹಾಗೂ ಅವರ ಕಿರುಕುಳ ತಾಳಲಾರದೇ ಯಾವುದೇ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಕ್ಷ ದೂರಿದೆ.

ಪ್ರಧಾನಮಂತ್ರಿಗಳು 40% ಕಮಿಷನ್ ಬಗ್ಗೆ ತಿಳಿದ ಕೂಡಲೇ ಮೊದಲೇ ಇದರ ಬಗ್ಗೆ ಕ್ರಮ ತೆಗೆದುಕೊಂಡಿದ್ದರೆ ಇವತ್ತು ಸಂತೋಷ ಪಾಟೀಲ ಅವರು ಈ ಆತ್ಮಹತ್ಯೆಗೆ ಯೋಚಿಸುತ್ತಿದ್ದಿಲ್ಲ ಈಕಾರಣ ಪರೋಕ್ಷವಾಗಿ ಮಾನ್ಯ ಪ್ರಧಾನಮಂತ್ರಿಗಳು ಯಾವುದೇ ಪ್ರತಿಕ್ರಿಯೆ ಕೊಡದೆ ಅವರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆಯಾಗುತ್ತದೆ.

ಈ ಮೂಲಕ ರಾಷ್ಟ್ರಪತಿಗಳ ಒತ್ತಾಯಿಸುವದೇನಂದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಇದಕ್ಕಾಗಿ ಕೂಡಲೇ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸಿ ಹಾಗೂ ಐಪಿಸಿ ಸೆಕ್ಷನ್ 306‌ ಕೊಲೆಯ ಪ್ರಚೋದಿಸಿದ್ದಾಕ್ಕಾಗಿ ಕೆ.ಎಸ್.ಈಶ್ವರಪ್ಪ,ಆಪ್ತ ಬಸವರಾಜ,ರಮೇಶ ಅವರನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆ ಕೊಟ್ಟು ಇಕಮಿಷನ್ ದಂಧೆಗೆಮುಕ್ತಾಯ ಹಾಡಬೇಕೆಂದು ಎಎಪಿ ಪಕ್ಷದ ವತಿಯಿಂದ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ ಜಕ್ಕಣ್ಣವರ, ರವಿ ಉದಯ, ಪ್ರವೀಣ,ಅನಂತಕುಮಾರ ಬುಗಡಿ ಮುಂತಾದವರು ಭಾಗವಹಿಸಿದ್ದರು.

Share News

About admin

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *