Breaking News

ತನಿಖೆ ನಂತರ ಕಾಂಗ್ರೆಸ್ ಪಕ್ಷದ ಬಣ್ಣ ಬಯಲು : ಅರುಣ್ ಸಿಂಗ್ ಕಿಡಿ

ಹುಬ್ಬಳ್ಳಿ: 40% ಕಮೀಷನ್ ಆರೋಪದ ಹಿಂದೇ ಯಾರಿದ್ದಾರೆ ಎಂಬುವುದು ಗೊತ್ತಿದೆ. ಇದೆಲ್ಲ ಕಾಂಗ್ರೆಸ್ ಷಡ್ಯಂತ್ರ. ತನಿಖೆಯ ನಂತರ ಎಲ್ಲವೂ ಹೊರಬರಲಿದೆ. ಕಾಂಗ್ರೆಸ್ ನಾಯಕರು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಮಿಷನ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದೆ. ಮೊದಲ ಬಾರಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿದ್ದಾರೆ. ಕಾರ್ಯಕಾರಣಿಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆಗೆ ಬರಲಿವೆ ಎಂದರು.

ಮುಂಬರುವ ದಿನದಲ್ಲಿ ಕಾಂಗ್ರೆಸ್ ಇನ್ನಷ್ಟು ಷಡ್ಯಂತ್ರ ರೂಪಿಸಲಿದೆ ಎಂದ ಅವರು, ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟು ಅರುಣ್ ಸಿಂಗ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಈ ಹಿಂದೇ ವಿಡಿಯೋ ರೂಪಿಸಿದ್ದು, ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಷ್ಟೇ ವಿರೋಧಿಸಿದರೂ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ‌ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Share News

About admin

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *