ಹುಬ್ಬಳ್ಳಿ:- ಮಿನಿ ವಿಧಾನ ಸೌದದಲ್ಲಿರುವ ಸರಕಾರಿ ಕಛೇರಿಗೆ ನುಗ್ಗಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಿಮ್ಮ ಬಗ್ಗೆ ಮಾಹಿತಿ ಇನ್ನಿತರ ದಾಖಲೆ ಮತ್ತು ನೀವೂ ಸರಿಯಾಗಿ ಕೆಲಸ ಮಾಡಿತ್ತಿಲ್ಲ ಎಂದು ಕಿರುಕುಳ ನೀಡಿರುವ ಬಲವಾದ ಆರೋಪ ಕೇಳಿ ಬಂದಿದೆ.ಹೌದು.ಮುಂಜಾನೆಯಿಂದಲೇ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಗಂಟೆಗಳ ಕಾಲ ಸಿಬ್ಬಂದಿ ಹಾಗೂ ಅಧಿಕಾರಿಗಳ ಮಾಹಿತಿ ನೀಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಸ್ಥಳಕ್ಕೆ ದೌಡಾಯಿಸಿ ಕಾರ್ಯಕರ್ತರನ್ನು ಬಂಧನ ಮಾಡಿದ್ದು, ಈಗ ಸರಕಾರಿ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಇನ್ನೂ ಯಾವುದೇ ಪೋಲಿಸರಿಗೆ ಯಾವುದೇ ಮಾಹಿತಿ ನೀಡದೇ ಸರಕಾರಿ ಕಚೇರಿಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸರಕಾರಿ ನೌಕರರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





