Breaking News

ಹುಬ್ಬಳ್ಳಿಯಲ್ಲಿ ವರ್ಷದ ಮೊದಲ ಅಂಗಾರಿಕ ಸಂಕಷ್ಟಿ ಆಚರಣೆ

ಹುಬ್ಬಳ್ಳಿ : ಹು-ಧಾ ಅವಳಿ ನಗರ ಸೇರಿದಂತೆ ಎಲ್ಲೆಡೆ ವರ್ಷದ ಮೊದಲ ಅಂಗಾರಿಕ ಸಂಕಷ್ಟಿಯನ್ನು ಇಂದು (ಮಂಗಳವಾರ) ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಹುಬ್ಬಳ್ಳಿಯ ಅಕ್ಕಿಹೊಂಡದ ಗಣೇಶ ದೇವಸ್ಥಾನ, ಶಿರೂರ ಪಾರ್ಕನ ಗಣೇಶ ದೇವಸ್ಥಾನ, ಬಾಕಳೆ ಗಲ್ಲಿಯ ವಿನಾಯಕ ದೇವಸ್ಥಾನ, ದಾಜಿಬಾನ್‌ಪೇಟ, ಗೋಡ್ಸ್‌ಸೆಡ್‌ ರಸ್ತೆಯ ಅಷ್ಟವಿನಾಯಕ ದೇವಸ್ಥಾನ, ಸೂಪರ್‌ ಮಾರ್ಕೇಟ್‌ನ ಗಣೇಶ ದೇವಸ್ಥಾನ, ಕುಂಬಾರ ಓಣಿಯ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಮಾಡಲಾಗಿತ್ತು. ಬೆಳಿಗ್ಗೆನಿಂದಲೇ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಅದರಲ್ಲೂ ಗಣೇಶಪೇಟೆಯ ಗಣೇಶದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು ವಿಶೇಷ ಹೋಮ ಮತ್ತು ಹವನ ನಡೆದವು.

ಬೆಳಗ್ಗೆಯಿಂದ ನಗರದ ಜನರು ಕುಟುಂಬ ಸಮೇತರಾಗಿ ಆಗಮಿಸಿ ಆಶೀರ್ವಾದ ಪಡೆದುಕೊಂಡರು. ಗಣಪತಿ ಎಲ್ಲಾ ಗಣಗಳಿಗೂ ಅಧಿಪತಿ. ಹೀಗಾಗಿ ಎಲ್ಲಾ ಪೂಜೆ ಪುನಸ್ಕಾರ ಸಂದರ್ಭವೂ ಪ್ರಥಮ ಪೂಜಿತ ವಿಘ್ನ ವಿನಾಶಕನ ಪೂಜೆ ನಡೆಸಿ ಆತನ ಕ್ರಪೆಗೆ ಪಾತ್ರರಾಗುತ್ತಾರೆ. ಗಣೇಶನಿಗೆ ಗರಿಕೆ ಅಥವಾ ದೂರ್ವೆ ಬಲು ಪ್ರಿಯವಾದುದು. ಅದಕ್ಕಾಗಿಯೇ ಆತನಿಗೆ ದೂರ್ವಾರ್ಚನೆ ನಡೆಸುವ ಸಂಪ್ರದಾಯವೂ ಇದೆ. ಸಿಹಿ ಮೋದಕ ಪ್ರಿಯ ಗಣಪ ಎನ್ನುವ ಪುರಾಣವೂ ಇದೆ.

ಒಟ್ಟಿನಲ್ಲಿ ಹಿಂದೂ ಧರ್ಮದ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಅಂಗಾರಿಕ ಸಂಕಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬಹುತೇಕ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವೂ. ಸಹಸ್ರಾರು ಭಕ್ತರು ವಿಶೇಷ ದಿನದಂದು ದೇವಶ ದರ್ಶನ ಪಡೆದು ಪುನೀತರಾದರು.

Share News

About admin

Check Also

ನಾಡಿನ ಸಮಸ್ತ ಕಾರ್ಮಿಕರಿಗೆ ಬಿಗ್‌ ಟಿವಿ ನ್ಯೂಸ್‌ ವತಿಯಿಂದ ಕಾರ್ಮಿಕ ದಿನದ ಶುಭಾಶಯಗಳು

ಮೇ 1 ಹೌದು ಇಂದು ರಾಷ್ಟ್ರಿಯ ಕಾರ್ಮಿಕ ದಿನಾಚರಣೆ ಹಿನ್ನಲೆ ದಿನವಿಡೀ ಕೆಲಸ ಮಾಡುವ ಹಾಗೂ ದಿನನಿತ್ಯ ಕಷ್ಟಪಟ್ಟು ದುಡಿಯು …

Leave a Reply

Your email address will not be published. Required fields are marked *

You cannot copy content of this page