ಹುಬ್ಬಳ್ಳಿ: ಎಸ್.ಎಸ್.ಕೆ. ಸಮಾಜ ಚಿಂತನ-ಮಂಥನ ಸಮಿತಿ ಕರ್ನಾಟಕ ಹಾಗೂ ಸಿಕರ್ಸ್ ಅಕಾಡೆಮಿ ಸಹಯೋಗದೊಂದಿಗೆ ಇದೇ. ದಿ. ೨೨, ೨೩ ಹಾಗೂ ೨೪ರಂದು ಮೂರು ದಿನಗಳ ಕಾಲ ಸಂಪೂರ್ಣ ಆರೋಗ್ಯದ ರಹಸ್ಯ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ ಎಂದು ಹೊಲಿಸ್ಟಿಕ್ ಟ್ರೇನರ್ ಸೂರ್ಯಕಾಂತ ಪೂಜಾರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೬ ರಿಂದ ೮.೨೦ ರವರೆಗೆ ಶಿಬಿರ ಆರಂಭವಾಗಲಿದ್ದು, ಬೆ. ೫.೫೦ ಹಾಜರಾಗಬೇಕು ಎಂದರು.
ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳು, ಪೂರ್ವಜರು ಹಾಗೂ ಸಂತರು ಯಾವ ರೀತಿ ತಮ್ಮ ಆರೋಗ್ಯವನ್ನು ಯಾವುದೇ ಔಷಧಗಳನ್ನು ಬಳಸದೇ ಆರೋಗ್ಯವಿದ್ದರು.. ಆದ್ದರಿಂದ ಈ ಮೂರು ದಿನಗಳ ಕಾಲ ವ್ಯಾಯಾಮ, ಧ್ಯಾನ, ಯೋಗ, ಪ್ರಾಣಾಯಾಮಗಳ ಮೂಲಕ ತಿಳಿಸಲಾಗುವುದು . ಅಲ್ಲದೇ ದೈಹಿಕ ಯೋಗಕ್ಷೇಮದೊಂದಿಗೆ ಮಾನಸಿಕ ಯೋಗಕ್ಷೇಮವನ್ನು ದೈಹಿಕ ಮತ್ತು ಮಾನಸಿಕ ಗುಣಮಟ್ಟವನ್ನು ದಿನವಿಡಿ ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳವುದು ಹೇಗೆ ಎಂಬ ಪ್ರಾಚೀನ ರಹಸ್ಯವನ್ನು ತಿಳಿಸಿಕೊಡಲಾಗುವುದು ಎಂದರು.
ಶಿಬಿರಾರ್ಥಿಗಳು ಶಿಬಿರಕ್ಕೆ ಯೋಗಾ ಮ್ಯಾಟ್, ಬುಕ್, ಪೆನ್ ಹಾಗೂ ಕುಡಿಯಲು ನೀರು ತರುವುದು ಕಡ್ಡಾಯ.
೭೮೯೨೦೭೬೭೬೮, ೯೮೪೫೭೬೩೭೮೨ ಅಥವಾ seekersacademy2020@gmail.com ಗೆ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹನುಮಂತಸಾ ನಿರಂಜನ, ರಾಜಶ್ರೀ ಜಡಿ, ಮಂಜುನಾಥ ಮಿಸ್ಕಿನ್, ಶ್ರೀಕಾಂತ ಹಬೀಬ್, ವಿನಾಯಕ ಸೇರಿದಂತೆ ಉಪಸ್ಥಿತರಿದ್ದರು..
bigtvnews | Hubli Dharwad News | Kannada News | Karnataka News Hubli News | News In Hubli | Local news

