ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣ ಸಾವು ಕಂಡಿರುವ ಘಟನೆ ನಡೆದಿದೆ. ಚಾಮರಾಜಪೇಟೆಯ ಮಾರ್ಕೆಟ್ ರಸ್ತೆ ಆನಂದಪುರದಲ್ಲಿ ಘಟನೆ ನಡೆದಿದೆ, ಬೆಳಗ್ಗೆ 5.30ರ ವೇಳೆಗೆ ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವು ಕಂಡಿದ್ದಾಳೆ.ಸಾವನ್ನ ಮಗ್ಗಲಲ್ಲೇ ಇಟ್ಟು ಆನಂದಪುರ ಜನ ಓಡಾಡುತ್ತಿದ್ದಾರೆ. ಪೈಪ್ ಲೈನ್ ಗೆ ಮೋಟರ್ ಅಳವಡಿಸಲು ವೈಯರ್ ಕನೆಕ್ಷನ್ ಇಡಲಾಗಿದೆ. ಅದನ್ನ ಹಾಗೇ ಇಟ್ಟು ಜನ ಓಡಾಡುತ್ತಿದ್ದಾರೆ. ಮಕ್ಕಳು ಶಾಲೆಗೆ ಓಡಾಡೋದು ಕೂಡ ಇದೇ ರಸ್ತೆಯಲ್ಲಿ . ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

Oplus_131072