ಹುಬ್ಬಳ್ಳಿ :ಪೇಡಾನಗರಿ ಧಾರವಾಡದಲ್ಲೊಂದು ಊಹಿಸಲಾರದ ಘಟನೆಯೊಂದು ನೆಡೆದಿತ್ತು. ಅದರ ಕುರಿತಾಗಿ ದಿನಾಂಕ 13-2-2022 ರಂದು ಬಿಗ್ ಟಿವಿ ನ್ಯೂಸ್ ವಾಹಿನಿ ಒಂದು ವರದಿ ಪ್ರಸ್ತುತವಾಗಿ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತು ಪ್ರತಿಕ್ರಿಯಿಸಿದ ಹು-ಧಾ ಪೋಲಿಸ್ ಆಯುಕ್ತರು ಆ ಸುದ್ದಿಯಲ್ಲಿ ಶಾಮಿಲಾದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದರ ಜೊತೆಗೆ ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಿ, FIR ದಾಖಲಿಸಿಕೊಂಡಿದ್ದಾರೆ.

ಜೀವನವನ್ನು ನಡೆಸಲು ಲಾರಿ ಯನ್ನು ಖರೀದಿಸಿ ಆ ವಾಹನವನ್ನು ಬೇರೆಯವನ ಹತ್ತಿರ ದುಡಿಯೋಕೆ ನೀಡಲಾಗಿತ್ತು. ಆದ್ರ ಆತ ಮಾಡಿದ ನಂಬಿಕೆ ದ್ರೋಹಕ್ಕೆ ಲಾರಿ ಮಾಲೀಕನ ಗೋಳು ಕೇಳುವವರಿಲ್ಲದಂತಾಗಿತ್ತು. ಆದರೆ ಈ ಸಮಸ್ಯೆಗೆ ಬಿಗ್ ಟಿವಿ ನ್ಯೂಸ್ ಪ್ರಸಾರ ಮಾಡಿದ ಸುದ್ದಿಗೆ ಅಧಿಕಾರಿಗಳು ಎಚ್ಚತ್ತುಕೊಂಡಿದ್ದಾರೆ.

ಈ ಕುರಿತು ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು,ಚಿಟಿಂಗ್ ಕೇಸ್ ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಮಲಿಕ್ ಹತ್ತಿರ 1 ಲಕ್ಷ 50 ಸಾವಿರ ತೆಗೆದುಕೊಂಡು, ಮಿಸ್ತ್ರೀಗಳಿಂದ 3 ಲಕ್ಷ 50 ಸಾವಿರ ರೂ..? ಗಳನ್ನು ಸಾಹೇಬ್ರಿಗೆ ಕೋಡಬೇಕು ಅಂತಾ ವಸೂಲಿ ಮಾಡಿದ್ದು,ವಸೂಲಿ ಮಾಡಿದ 6 ರಿಂದ 7 ಪೋಲಿಸು..? ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದೇ ವಿರ್ಪಯಾಸ.

ಈ ಘಟನೆ ಹು-ಧಾ ಆಯುಕ್ತರ ಗಮನಕ್ಕೆ ಬಂದಿದ್ದು,ಈ ಸುದ್ದಿಯಲ್ಲಿ ಶಾಮೀಲಾದ ಪೋಲಿಸರಿಗೆ ಖಡಕ್ ಸೂಚನೆ ನೀಡಿದ್ದಾರೆ.ಆದ್ರೆ ಪೋಲಿಸರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲಾ.ಒಟ್ಟಿನಲ್ಲಿ ಹು-ಧಾ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದು,ಮುಂದಿನ ದಿನಗಳಲ್ಲಿ ಯಾವ ರೀತಿ ಕಾನೂನು ಕ್ರಮ ಕೈಗೊಳ್ತಾರೆ ಕಾದು ನೋಡಬೇಕಿದೆ.

bigtvnews | Hubli Dharwad News | Kannada News | Karnataka News Hubli News | News In Hubli | Local news

