ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಯೋಬ್ಬ ಪೊಲೀಸ್ ಠಾಣೆಯಲ್ಲೇ ಟರ್ಪೆಂಟೇಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ . ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿ ಹೀಗೆ ಮಾಡಿಕೊಂಡಿದ್ದನೆಂದು ಹೇಳಲಾಗುತ್ತಿದೆ .
ಚಿಕಿತ್ಸೆಗಾಗಿ ಆತನನ್ನ ಕಿಮ್ಸ್‌ಗೆ ದಾಖಲು ಮಾಡಲಾಗಿದೆ . ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ರಾತ್ರಿ ಸಮಯದಲ್ಲಿ ಆರೋಪಿ ಟರ್ಪೆಂಟೇಲ್ ಕೇಳಿದ್ದಾನೆ.ಯಾವುದೋ ಗಾಯಕ್ಕೆ ಇರಬಹುದೆಂದು ಪೊಲೀಸರು ತಂದು ಕೊಟ್ಟಿದ್ದಾರೆ . ಕೆಲವೇ ನಿಮಿಷಗಳಲ್ಲಿ ಅದನ್ನ ಕುಡಿದಿದ್ದಾನೆ , ಅಷ್ಟರಲ್ಲಿಯೇ ಎದುರಿಗೆ ಇದ್ದ ಮತ್ತೊಬ್ಬ ಆರೋಪಿಯೂ ಆಗಿರುವ ಅದನ್ನ ( ಬಾಟಲಿ ) ಕೆಳಗೆ ಹೊಡೆದು ಬೀಳಿಸಿದ್ದಾರೆ . ಆದರೆ , ಟರ್ಪೆಂಟೇಲ್ ಕುಡಿದ ಆರೋಪಿ ಪ್ರಜ್ಞೆತಪ್ಪಿ ಬಿದ್ದು ಹೈಡ್ರಾಮಾ ಕ್ರಿಯೇಟ್ ಆಗಿದೆ ಎಂದು ಹೇಳಲಾಗುತ್ತಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

