Breaking News

ಹಾಸನದ ಸೌದರ್ಯ ನೋಡಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ

ಹಾಸನ: ಅದಿ ದೇವತೆ ಹಾಸನಾಂಬೆ ದೇವಲಾಯವನ್ನು ಪ್ರತಿವರ್ಷದಂತೆ ಈವರ್ಷವು ಕೂಡ ನವೆಂಬರ್ ೨ರ ಗುರುವಾರದಂದು ಗರ್ಭಗುಡಿ ಬಾಗಿಲು ತೆಗೆಯುತ್ತಿದ್ದು, ಈಗಾಗಲೇ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂತಿಮ ಸ್ಪರ್ಶ ನೀಡಿದ್ದಾರೆ. ಇನ್ನು ಹಾಸನ ನಗರದ ಉದ್ದಲಕ್ಕೂ ಬಣ್ಣ ಬಣ್ಣದ ಲೈಟಿಂಗ್ಸ್ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಎಂದು ಕರೆಯುತ್ತೇವೆ. ಇದೆ ವೇಳೆ ಹಾಸನಾಂಬೆ ಬಾಗಿಲನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ತೆಗೆದು ಭಕ್ತರಿಗೆ ದರ್ಶನ ನೀಡಲಿದೆ.

ದೇವಿಯ ದರ್ಶನಕ್ಕಾಗಿ ಸ್ಥಳೀಯವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಆಗಮಿಸುತ್ತಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರನ್ನು ಸ್ವಾಗತ ಮಾಡಲು ಜಿಲ್ಲಾಡಳಿತವು ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇನ್ನು ಅಲ್ಲಲ್ಲಿ ರಸ್ತೆಗಳು ಗುಂಡಿ ಬಿದ್ದಿರುವ ಪರಿಣಾಮ ಅದಕ್ಕೆ ಪ್ಯಾಚ್ ಮಾಡುವ ಕೆಲಸ ಮಾಡಿದೆ. ಮುಖ್ಯ ರಸ್ತೆ ಉದ್ದಲಕ್ಕೂ ಕಣ್ಣಿಗೆ ಆನಂದ ನೀಡುವ ವಿವಿಧ ಬಣ್ಣದ ಲೈಟಿಂಗ್ಸ್, ವೃತ್ತಗಳಲ್ಲಿ ದೇವರ ಮೂರ್ತಿ ಇರುವ ಲೈಟಿಂಗ್ಸ್ ಸೇರಿದಂತೆ ಇತರೆ ಆಕರ್ಷಣೆಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಯಾವ ಸಂದೇಹವಿಲ್ಲ.

ಈ ವರ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಅವರಿಗೆ ಯಾವ ಸಮಸ್ಯೆ ಆಗದಂತೆ ದಿನದ ೨೪ ಗಂಟೆಗಳ ಕಾಲ ದರ್ಶನದ ಭಾಗ್ಯ ಕಲ್ಪಿಸಲಾಗಿದೆ. ಸರದಿ ಸಾಲಿನಲ್ಲಿ ಬರುವವರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸಣ್ಣ ಮಕ್ಕಳು ಇದ್ದರೇ ತಾಯಾಂದಿರು ಹಾಲುಣಿಸಲು ಪ್ರತ್ಯೇಕ ಎರಡು ಕೊಠಡಿ, ವೃದ್ಧರು ಶೀಘ್ರ ದೇವರ ದರ್ಶನ ಮಾಡಲು ಅವಕಾಶ, ಬಂದ ಭಕ್ತರಿಗೆಲ್ಲಾ ಉಚಿತ ಪ್ರಸಾದ, ದೇವಿಯ ಗರ್ಭಗುಡಿ ಬಳಿ ಎಸಿ ಅಳವಡಿಕೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.

ಕಳೆದ ವರ್ಷದಲ್ಲಿ ಆದ ಗೊಂದಲ ಈವರ್ಷ ಮರುಕಳಿಸಬಾರದು ಎಂದು ಹೆಚ್ಚಿನ ಪೊಲೀಸ್ ಬಿಗಿ ಬಂದುಬಸ್ತ್ ಮಾಡಲಾಗಿದ್ದು, ಯಾರಾದರೂ ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳು ಬಂದರೇ ಅವರ ಕುಟುಂಬ ಬಿಟ್ಟು ಮತ್ಯಾರು ಸುಕಸುಮ್ಮನೆ ಜೊತೆಯಲ್ಲಿ ಆಗಮಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ದಿನದ ೨೪ ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಇರುವುದರಿಂದ ಭಕ್ತರು ಸುಗಮವಾಗಿ ಸರದಿ ಸಾಲಿನಲ್ಲಿ ಹೋಗಿ ದೇವಿ ದರ್ಶನ ಮಾಡಬಹುದು. ಈ ವರ್ಷ ೧೦ ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಮಾಡಲಿದ್ದಾರೆ ಎಂಬುದು ನಿರೀಕ್ಷೆ ಮಾಡಲಾಗಿದೆ

Share News

About BigTv News

Check Also

ಖಾಕಿ ಕಾರ್ಯಾಚರಣೆಗೆ ಜಯ..! PSI ಗುಡದರಿ ತನಿಖೆಯಲ್ಲಿ ಗಾಂಜಾ ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ..!!

ಗಾಂಜಾ ಮಾರಾಟಗಾರರಿಗೆ ಕೋರ್ಟ್‌ನಿಂದ ಖಡಕ್ ಏಟು..! PSI ಗುಡದರಿ ತನಿಖೆಗೆ ನ್ಯಾಯಾಲಯದ ಮುದ್ರೆ..!! ಗಾಂಜಾ ದಂಧೆಕೋರರಿಗೆ ಜೈಲೇ ಗತಿ..! 3 …

Leave a Reply

Your email address will not be published. Required fields are marked *