Breaking News

ಧಾರವಾಡದಲ್ಲಿ ಮಳೆಗಾಗಿ ಪೂಜೆ ಮೊರೆ ಹೋದ ಅಜ್ಜಿ: ಪೂಜೆ ಜೊತೆ ಹಾಡು ಹೇಳಿ ಮಳೆರಾನಿಗೆ ಅಹ್ವಾನ

ಧಾರವಾಡ: ರಾಜ್ಯದಲ್ಲಿ ಪೂರ್ವ ಮುಂಗಾರು ಸೇರಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನತೆ ಮಳೆಗಾಗಿ ಪೂಜೆ ಪ್ರಾರ್ಥನೆಯಲ್ಲಿ ತೋಡಗಿದ್ದು, ಅದೇ ರೀತಿ ಧಾರವಾಡದಲ್ಲಿ ಅಜ್ಜಿಯೊಬ್ಬರು ಗುರ್ಜಿ ಪೂಜೆ ಮಾಡುವ ಮೂಲಕ ಮಳೆರಾಯ ಅಹ್ವಾನಿಸಿದ್ದಾರೆ.

ತಾಲೂಕಿನ ಮನಸೂರು ಗ್ರಾಮದ ನಿವಾಸಿ ರುದ್ರಮ್ಮಾ ಅಜ್ಜಿ ತಮ್ಮ ಮನೆಯ ಅಂಗಳದಲ್ಲಿ ಗುರ್ಜಿ ಪೂಜೆ ಮಾಡಿ, ಹಾಡು ಹೇಳುವ

ಮೂಲಕ ವರುಣನನಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಸಕಲ ಜೀವ ರಾಶಿಗಳ ಬದುಕು ನಿನ್ನ ಕೈಯಲ್ಲಿದೆ. ಅವುಗಳನ್ನು ಬದುಕಿಸಲು ನೀನು ಬರಬೇಕು, ಕರುಣೆ ತೋರು ಮಳೆರಾಯ ಎಂದು ಹಾಡು ಹೇಳಿ ಅಜ್ಜಿ ದೇವರಿಗೆ ಮಳೆಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …

Leave a Reply

Your email address will not be published. Required fields are marked *