Breaking News

ಸಾರ್ವಜನಿಕರೇ ಹಿಡಿದು ಕೊಟ್ಟ ಕಳ್ಳರನ್ನು ಕಸಬಾ ಪೇಟ ಪೋಲಿಸರು ಬಿಟ್ಟು ಕಳಿಸಿದ್ಯಾಕೇ? ಕಳ್ಳಾ-ಪೋಲಿಸ್ ಆಟದಲ್ಲಿ ನೆಡೆದ ಡೀಲಿಂಗ್ ಏನು…?

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೊರವಲಯದ ಗಬ್ಬೂರು ಬೈಪಾಸ್ ಹತ್ತಿರ ಸ್ಕ್ರ್ಯಾಪ್ ಕಳ್ಳತನ ಮಾಡುವಾಗ ಸಾರ್ವಜನಿಕರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಎರಡು ದಿನಗಳ ಹಿಂದೆ ನೆಡೆದಿತ್ತು.

ಎರಡು ದಿನಗಳ ಹಿಂದೆ ಅಂದ್ರೆ 28-4-2022 ರಂದು ಸ್ಕ್ರ್ಯಾಪ್ ಕಳ್ಳತನ ಮಾಡುವಾಗ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು,ಸಾರ್ವಜನಿಕರೇ ಕಳ್ಳರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದು,ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ತಬ್ರೀಜ್ ಖಾನ ಮತ್ತು ಇನ್ನುಳಿದ ಮೂವರು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ‌.ಇಬ್ಬರು ವಿರುದ್ಧ ಹುಬ್ಬಳ್ಳಿಯ ಕಸಬಾಪೇಟ್ ಪೋಲಿಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು,ನಾಲ್ಕು ಜನರಲ್ಲಿ ಮೂವರು ಪರಾರಿಯಾಗಿದ್ದು,ಪ್ರಮುಖ ಆರೋಪಿ ತಬ್ರೀಜ್ ಖಾನ ಸಿಕ್ಕಿಬಿದ್ದಿದ್ದಾನೆ.ಮರುದಿನ ಇಬ್ಬರ ಮೇಲೆ ದೂರು ದಾಖಲಾಗಿದ್ದು,ಇನ್ನುಳಿದ ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ. ಆದ್ರೆ ಸಾರ್ವಜನಿರು ರೆಡ್ ಹ್ಯಾಂಡ್ ಆಗಿ ಹಿಡಿದು ಕೊಟ್ಟ ಆರೋಪಿಗಳನ್ನು ಪೋಲಿಸರು ಬಿಟ್ಟು ಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಸದ್ಯಕ್ಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ದೂರು ದಾಖಲಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ಆರೋಪಿಗಳು ನ್ಯಾಯಾದೀಶರ ಮುಂದೆ ಬಿಚ್ಚಿಟ್ಟ ಸತ್ಯವಾದರು ಏನು? ಸತ್ಯ ಕೇಳಿ ನ್ಯಾಯಾದೀಶರು ಪೋಲಿಸರಿಗೆ ಛಿ ಮಾರಿ ಹಾಕಿದ್ಯಾಕೇ?.

ಅಷ್ಟಕ್ಕೂ ಇನ್ನುಳಿದ ಆರೋಪಿಗಳನ್ನು ಬಿಟ್ಟು ಕಳಿಸಿದ್ದರ ಹಿಂದೆ ಹಣದ ವ್ಯವಹಾರದ ವಾಸನೆ ಎದ್ದು ಬರುತ್ತಿದ್ದು,ಪ್ರಮುಖ ಆರೋಪಿಯೊಂದಿಗೆ ಡೀಲ್ ಮಾಡಿಕೊಂಡು ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗ್ತಿದೆ.

ಇನ್ನು ವಾಣಿಜ್ಯ ನಗರಿಯಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದು, ಈ ಕುರಿತು ಆಯುಕ್ತರು ಹೇಳೋದೆನೆಂದ್ರೆ ಸುದ್ದಿ ಪ್ರಕಟವಾದ ಎರಡು ಮೂರು ದಿನಗಳಲ್ಲಿ ತನಿಖೆ ನೆಡೆಸುವುದಾಗಿ ಆಯುಕ್ತರು ಹೇಳ್ತಾರೆ. ಎರಡು ಮೂರು ದಿನಗಳಲ್ಲಿ ಆಯುಕ್ತರೇ ಸುದ್ದಿನೆ ಮರೆತು ಬಿಡ್ತಾರೆ ಅಂತಾ ಪೋಲಿಸರು ರಾಜಾರೋಷವಾಗಿ ಹೇಳ್ತಿದ್ದಾರೆ‌.

ಇದನ್ನೆಲ್ಲಾ ಗಮನಿಸಿದ್ರೆ ಹು-ಧಾ ಆಯುಕ್ತರ ಮೇಲಿನ ಭಯ ಪೋಲಿಸರಿಗೆ ಇಲ್ಲವಾಯ್ತಾ ಎಂಬ ಅಂಶ ಸಹಜವಾಗಿ ಗೊಚರವಾಗ್ತಿದೆ.

ಇನ್ನದರೂ ಇಂತಹ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪ್ರಕರಣಗಳಿಗೆ ಹು-ಧಾ ಆಯುಕ್ತರು ಬ್ರೇಕ್ ಹಾಕ್ತಾರೆ ಕಾದು ನೋಡಬೇಕಿದೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *