ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೇಸಿಗೆ ರಜಾ ಆಹಾರದ ಧಾನ್ಯದ ಕಿಟ್ ಗಳನ್ನು ಶನಿವಾರ ಸಂಜೆ ವಿತರಿಸಲಾಯಿತು .
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರಬರಾಜಾದ ಮಕ್ಕಳ ಬೆಳವಣಿಗೆ ಪೌಷ್ಟಿಕ ಆಹಾರವನ್ನು ಅಂಗನವಾಡಿ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಯೋಗಪ್ಪನವರ ವಿತರಿಸಿದರು . ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ನಾಗರತ್ನ ದಾನನ್ನವರ , ಎಲ್ಲವ್ವ ಹುಲಿಕಟ್ಟಿ , ಶೋಭಾ ಯೋಗಪ್ಪನವರ , ದೇವಕ್ಕ ಕಟಗಿ , ಹಾಗೂ ಇನ್ನಿತರರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

