Breaking News

ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ 50 ಲಕ್ಷ ರೂ.ವಂಚನೆ


ಹುಬ್ಬಳ್ಳಿ : ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ನಿವೃತ್ತ ವೈದ್ಯಾಧಿಕಾರಿಗೆ 50 ಲಕ್ಷ ರೂ.ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ .

ಇಲ್ಲಿನ ಗೋಕುಲ ರುದ್ರಗಂಗಾ ಲೈಔಟ್ ನಿವಾಸಿ ಶೈಲಾ ಪಾಟೀಲ ಎಂಬುರಿಗೆ ವಂಚನೆಗೆ ಒಳಗಾದವರು . ಇವರು ವೈದ್ಯರಾಗಿದ್ದರು . ನಿವೃತ್ತಿಯ ನಂತರ ಬಂದ ಹಣವನ್ನು ಸಂಗ್ರಹ ಮಾಡಿ ಇಡಲು ಯೋಚಿಸಿ ತಮ್ಮಸ್ನೇಹಿರಿಗೆ ತಿಳಿಸಿದ್ದರು.ಅವರ ಸ್ನೇಹಿತರು , ಇಲ್ಲಿನ ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಹಣ ಹೂಡಿಕೆ ಮಾಡಿ ಎಂದು ಸಲಹೆ ನೀಡಿದರು . ಇದರನ್ವಯ ಶೈಲಾ ಅವರು ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಸಿಇಒ ಮಣಿಕಂಠನ್ ನಾಯರ್ ಭೇಟಿಯಾಗಿ ಹಣವನ್ನು ನಂಬಿ ಅಲ್ಲಿ ಇಟ್ಟರು . ಆದರೆ ಮಣಿಕಂಠನ್ ನಾಯರ್ ಮತ್ತು ಅವರ ತಾಯಿ ಕುಟತ್ ಗೋಪಾಲ ನಾಯರ ಎಂಬುವರು ಸೇರಿಕೊಂಡು ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಈಗ ಹಣ ನೀಡದೆ ವಂಚಿಸಿದ್ದಾರೆ.ಶೈಲಾ ಅವರು ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ .

Share News

About admin

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *