Breaking News

ಟ್ರಕ್‌ ಬಸ್‌ಗೆ ಡಿಕ್ಕಿ: ಕರ್ನಾಟಕದ ಇಬ್ಬರು ಸಾವು


ಇಟಾವಾ, ಉತ್ತರ ಪ್ರದೇಶ: ಲಖನೌ-ಆಗ್ರಾ ಹೆದ್ದಾರಿಯಲ್ಲಿ ಟ್ರಕ್‌ ಬಸ್‌ಗೆ ಡಿಕ್ಕಿ ಹೊಡೆದ ‍ಪರಿಣಾಮ ಕರ್ನಾಟಕದ ಇಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

‘ಮೃತಪಟ್ಟವರನ್ನು ಬೆಳಗಾವಿಯ ವಿಠಲ್‌ ಮಾರುತಿ ಮತ್ತು ಅವರ ಪತ್ನಿ ಸುಲೋಚನಾ ಎಂದು ಗುರುತಿಸಲಾಗಿದೆ.

ವಿಠಲ್‌ ದಂಪತಿ ಹಾಗೂ ಉಳಿದ 11 ಮಂದಿ ಆಗ್ರಾಕ್ಕೆ ಪ್ರವಾಸಕ್ಕೆಂದು ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಟ್ರಕ್‌ವೊಂದು ಬಸ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಗಾಯಗೊಂಡವರನ್ನು ಇಟಾವಾದ ಸೈಫೈ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *