Breaking News

ಲೋಕ ಕಲ್ಯಾಣಾರ್ಥ ಕೊಟಗೊಂಡಹುಣಸಿ ಗ್ರಾಮದಲ್ಲಿ ಚೆಂಡಿಕಾ ಹೋಮ

ಹುಬ್ಬಳ್ಳಿ:ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥ ಸ

ಮಳೆ, ಬೆಳೆಗಾಗಿ ಚೆಂಡೀಕಾ ಹೋಮ್ ಮಾಡಲಾಯಿತು.

ಕೊಟಗೊಂಡಹುಣಸಿ ಗ್ರಾಮದ ಶ್ರೀಸಾಯಿ ಸೇವಾ ಸಮಿತಿ ಹಾಗೂ ಸಮಸ್ತ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಹೊನ್ನತ್ತೆಮ್ಮಾ- ಎಲ್ಲಮ್ಮ ದೇವಸ್ಥಾನದಲ್ಲಿ ನೇರವೇರಿದ ಲೋಕ ಕಲ್ಯಾಣಾರ್ಥ ಚೆಂಡಿಕಾ ಹೋಮ್ ವನ್ನು ವೇದಮೂರ್ತಿ ಗುರುಸಿದ್ದಯ್ಯ ಹಿರೇಮಠ ಹಾಗೂ ಚನ್ನಬಸಯ್ಯಶಾಸ್ತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಇನ್ನು ಈ ಒಂದು ಹೋಮ್ ದಲ್ಲಿ ವಿಘ್ನೇಶ್ವರ, ಉಮಾ ಮಹೇಶ್ವರ, ನವದುರ್ಗೇಶ್ವರ, ಚಂಡಿಕಾ ತಾಯಿಗೆ ಪೂಜೆ, ಹಾಗೂ ಹೊನ್ನತ್ತೆಮ್ಮಾ, ಎಲ್ಲಮ್ಮ ದೇವರಿಗೆ ರುದ್ರಾಭಿಷೇಕ, ಹೋಮ್ ಸೇವೆಗಳ ಮೂಲಕ‌ ಕಲ್ಯಾಣೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಇದೇ ವೇಳೆ ಮುಂಗಾರು ಆರಂಭಗೊಂಡಿದ್ದು ಮಳೆ, ಬೆಳೆ ಚೆನ್ನಾಗಿ ಆಗಲಿ, ರೈತನ ಬೆಳೆ ಉತ್ತಮವಾಗಲಿ, ಎಲ್ಲರ ಬದುಕು ಸಮೃದ್ದವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ಗ್ರಾಮ ಒಳಗೊಂಡಂತೆ ಸುತ್ತಲಿನ ಗ್ರಾಮಗಳ ಜನತೆ ದೇಗುಲಕ್ಕೆ ಬಂದು ಪೂಜೆ ಮಾಡಿಸಿದರು.

Share News

About admin

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *