ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹುದೊಡ್ಡ ಕಲಾವಿದ. ಒಂದಲ್ಲಾ ಎರಡಲ್ಲ ಸುಮಾರು ಹದಿಮೂರು ವಾದ್ಯಗಳನ್ನು ನುಡಿಸುವ ಇವರು ಹುಬ್ಬಳ್ಳಿಯ ಹೆಮ್ಮೆಯ ಕಲಾವಿದರು.
ಇಲ್ಲಿಯ ಶಿರಡಿನಗರದ ನಿವಾಸಿಯಾಗಿರುವ ಸ್ಟೀಫನ್ ಲುಂಜಾಳ ಸುಮಾರು ಹದಿಮೂರಕ್ಕೂ ಹೆಚ್ಚು ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ನುಡಿಸುವ ಇವರು ಸುಮಾರು ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಸಂಗೀತ ಸೇವೆಯನ್ನು ಮಾಡಿದ್ದಾರೆ. ಅದೆಷ್ಟೋ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ಲೋಕದಲ್ಲಿ ಹಗಲಿರುಳು ದುಡಿಯುವ ಇವರಿಗೆ ಅಪಾರ ಶಿಷ್ಯ ಒಳಗವೂ ಇದೆ. ಅದ್ಭುತ ಪ್ರತಿಭೆ ಇದ್ದರೂ ಎಲೆಮರೆಯ ಕಾಯಿಯಂತಿರುವ ಈ ಬಹುಮುಖ ಪ್ರತಿಭೆ ಇನ್ನೂ ಕೂಡ ಸ್ವಂತ ಸೂರು ಇಲ್ಲದೇ ಬಡತನದಲ್ಲಿ ಜೀವನ ನಡೆಸುವಂತಾಗಿದೆ. ಸಂಗೀತ ಕ್ಷೇತ್ರ ಅಷ್ಟೇ ಅಲ್ಲದೇ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಪ್ರವೀಣ, ಬೇಡವಾದ ವಸ್ತುಗಳನ್ನು ತಂದು ಗೃಹ ಅಲಂಕಾರಿಕ ವಸ್ತುಗಳನ್ನಾಗಿ ಮಾಡುವುದು ಇದರ ಇನ್ನೊಂದು ಹವ್ಯಾಸ. ಹಾರ್ಮೋನಿಯಂ, ತಬಲಾ, ಗಿಟಾರ್, ಡೋಲ್ ಸೇರಿದಂತೆ ಹದಿಮೂರ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡಿಸುವ ಇವರು ಇಂದಿಗೂ ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ಇನ್ನೂ ಸ್ಟೀಫನ್ ಅವರಿಗೆ ಗಿಟಾರ್ ಅಂದರೆ ನಿಜಕ್ಕೂ ಅಚ್ಚುಮೆಚ್ಚಿನ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್. ಗಿಟಾರ್ ಮಾತ್ರವಲ್ಲದೆ ಹದಿಮೂರು ವಾದ್ಯ ನುಡಿಸುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಇನ್ನೂ ವಿಶೇಷ ಅಂದರೆ ಮಹಾರಾಷ್ಟ್ರ, ರಾಜ್ಯಸ್ಥಾನ, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ಸಂಗೀತದ ಚಾಲ್ ಗಳನ್ನು ಅವರು ನುಡಿಸುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಅವರ ಹೊಂದಿದ್ದಾರೆ. ಈಗಾ ಸಾಕಷ್ಟು ಕಾರ್ಯಕ್ರಮದಲ್ಲಿ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡಿಸುವ ಮೂಲಕ ಸ್ಟೀಫನ್ ಸಂಗೀತ ಲೋಕದ ಮಾಂತ್ರಿಕ ಎಂದೇ ಬಿಂಬಿತರಾಗಿದ್ದಾರೆ. ಆದರೆ ಇಷ್ಟು ಪ್ರತಿಭೆಗಳಿದ್ದರೂ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಯಾವುದೇ ಪ್ರೋತ್ಸಾಹ ನೀಡದೇ ಇರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

