Breaking News

ಗ್ರಾಮೀಣ ಆಸ್ತಿಗಳ ಮಾಲೀಕತ್ವದ ಹಕ್ಕು ದಾಖಲೆಗಳ ವಿತರಣೆ


ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿ ಅಲ್ಲಾಪುರ,
ಯರಿನಾರಾಯಣಪುರ,ಕಡಪಟ್ಟಿ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ, ಭೂದಾಖಲೆಗಳ ಇಲಾಖೆ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಗ್ರಾಮೀಣ ಆಸ್ತಿಗಳ ಮಾಲೀಕತ್ವದ ಹಕ್ಕು ದಾಖಲೆಗಳ ವಿತರಣೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಚಿದಾನಂದ ಕುಸುಗಲ್ ತಹಶೀಲ್ದಾರ್ ಅಶೋಕ ಶಿಗ್ಗಾವಿ,ತಾಪಂ ಅಧಿಕಾರಿ ಡಾ.ಮಹೇಶ ಕುರಿ, ಎಸ್ ವಿ ಕುಲಕರ್ಣಿ, ಪಿ.ಡಿ.ಓ ಎಸ್ ಎಲ್ ಜೀವಣ್ಣವರ, ತಾಯವ್ವ ಕೆಂಚಣ್ಣವರ, ಎಸ್.ವಿ.ಕಮ್ಮಾರ,ನಿಲವ್ವ ಹೊಸಳ್ಳಿ,ವಿಶಾಲಾ ಯೋಗಪ್ಪನವರ,ಶೋಬಾ ನಲ್ಲೂರು,ಬಸಪ್ಪ ಕುರಿ,ಚಿದಾನಂದ ಪೂಜಾರ,ಮಂಜುನಾಥ ತಟ್ಟಿತಲಿ, ಶಾಂತಪ್ಪ ಕುಸುಗಲ್ ಸೇರಿದಂತೆ ಗ್ರಾಮದ ನೂರಾರು ಗುರು ಹಿರಿಯರು ಉಪಸ್ಥಿತರಿದ್ದರು.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *