Breaking News

ಹಸಿರು ಸಂಚಾರಿ ಪಥ ಲೋಕಾರ್ಪಣೆ


ಹುಬ್ಬಳ್ಳಿ : ಅವಳಿ ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ರಾಣಿಚನ್ನಮ್ಮನಗರ ಸೇತುವೆ ಹತ್ತಿರ 8 ಕೋಟಿ ರೂ . ವೆಚ್ಚದಲ್ಲಿ ನಿರ್ಮಾಣವಾದ 630 ಮೀಟರ್ ಉದ್ದದ ಮೊದಲ ಹಂತದ ಹಸಿರು ಸಂಚಾರಿ ಪಥವನ್ನು ಲೋಕಾರ್ಪಣೆಗೊಳಿಸಿ , 96 ಕೋಟಿ ರೂ . ವೆಚ್ಚದಲ್ಲಿ ಬಿಡನಾಳವರೆಗೆ ಎರಡನೇ ಹಂತದ ಹಸಿರು ಸಂಚಾರಿ ಪಥ ನಿರ್ಮಾಣ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಭೂಮಿ ಪೂಜೆ ನೆರವೇರಿಸಿದರು .

ಈ ಸಂದರ್ಭದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ , ಪ್ರದೀಪ್ ಶೆಟ್ಟರ್ , ಮಲ್ಲಿಕಾರ್ಜುನ ಸಾವಕಾರ , ನಾಗೇಶ್ ಕಲಬುರಗಿ ಸೇರಿದಂತೆ ಇನ್ನಿತರೆ ಪ್ರಮುಖರು ಉಪಸ್ಥಿತರಿದ್ದರು .

Share News

About admin

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *