ಧಾರವಾಡ: ನಗರದ ಹೊರವಲಯದ ರೈಲು ಹಳಿ ಬಳಿ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ . ಗಣೇಶ ನಗರದ ಅಶೋಕ್ ಗಾರ್ಡನ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ ಆಗಿದೆ .
ವ್ಯಕ್ತಿಯ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ನಂತರ ಧಾರವಾಡ ಉಪನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ .ಇನ್ನು ವ್ಯಕ್ತಿಯ ಶವದ ಸ್ಥಿತಿ ನೋಡಿದರೆ ಕೊಲೆಯಾದ ಶಂಕೆ ವ್ಯಕ್ತವಾಗಿದೆ ಮೃತ ವ್ಯಕ್ತಿಯ ಮುಖ ಗಾಯಗೊಂಡಿದ್ದರಿಂದ ಯಾರು ಎಂಬುವುದು ಗುರುತು ಸಿಕ್ಕಿಲ್ಲ , ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ . ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

