Warning: Undefined array key "wpdb" in /home/eamphica/public_html/wp-content/mu-plugins/blaze-curator-hq.php on line 4442
ರಾಜ್ಯದಲ್ಲಿ ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಕೇಂದ್ರ ಸಚಿವ ಎಚ್ ಡಿ ಕೆ - bigtvnews | Hubli Dharwad News | Kannada News | Karnataka News
Breaking News

ರಾಜ್ಯದಲ್ಲಿ ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಕೇಂದ್ರ ಸಚಿವ ಎಚ್ ಡಿ ಕೆ

ಹಾಸನ: ರಾಜ್ಯದಲ್ಲಿ ಮತ್ತೊಮೆ ಮೈತ್ರಿ ಸರ್ಕಾರ ಶೀಘ್ರದಲ್ಲೇ ಬಂದೇ ಬರುತ್ತದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದೆ ಜೆಡಿಎಸ್‌‍-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ.
ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದರು.
2006ರಲ್ಲಿ ಜೆಡಿಎಸ್‌‍ ಮತ್ತು ಬಿಜೆಪಿ ಸಮಿಶ್ರ ಸರಕಾರ ರಚನೆಯಾದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ.ಮುಂದೆ ನಿಮೆಲ್ಲರ ಆಶೀರ್ವಾದದಿಂದ ಬಿಜೆಪಿ-ಜೆಡಿಎಸ್‌‍ ಮೈತ್ರಿ ಸರ್ಕಾರ ಬರುವ ಆಶಯವಿದೆ. ನನ್ನ ಕನಸಿನ ಕೆಲವು ಶಾಶ್ವತ ಯೋಜನೆಗಳು ಹಾಗೆಯೇ ಉಳಿದಿವೆ. ಅವುಗಳನ್ನೆಲ್ಲಾ ಸಾಕಾರಗೊಳಿಸಬೇಕಿದೆ. ರೈತರ ಬದುಕನ್ನು ಕಟ್ಟಿಕೊಡುತ್ತೇವೆ ಎಂದು ಕೇಂದ್ರ ಸಚಿವರು ನುಡಿದರು.

Share News

About BigTv News

Check Also

ಬಾಲಕನ ಹತ್ಯೆ ಪ್ರಕರಣ: ಅಪ್ರಾಪ್ತರಿಬ್ಬರ ಬಂಧನ

ಬೆಂಗಳೂರು: ವಿಭೂತಿಪುರ ಕೆರೆಯ ಬಳಿ 13 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಎಚ್‌ಎಎಲ್ ಠಾಣೆ …

Leave a Reply

Your email address will not be published. Required fields are marked *